ದೊಡ್ಡ ಮಟ್ಟದಲ್ಲೇ ತಯಾರಾಗ್ತಿದೆ ಕಿಚ್ಚ ಸುದೀಪ್ ಹೊಸ ಸಿನಿಮಾ

ಗುರುವಾರ, 25 ಮೇ 2023 (08:50 IST)
Photo Courtesy: Twitter
ಬೆಂಗಳೂರು: ಕಿಚ್ಚ ಸುದೀಪ್ ಹೊಸ ಸಿನಿಮಾ ಬಗ್ಗೆ ಅಪ್ ಡೇಟ್ ಸಿಕ್ಕಿದೆ. ಇದರ ಪ್ರೋಮೋ ಶೂಟ್ ಕೂಡಾ ನಡೆದಿದೆ.
 

ಕಿಚ್ಚ ಸುದೀಪ್ ಪ್ರೋಮೋ ಶೂಟ್ ನ ತುಣುಕೊಂದು ನಿನ್ನೆ ವೈರಲ್ ಆಗಿದೆ. ಹೊಸ ಸಿನಿಮಾದ ಪ್ರೋಮೋ ಶೂಟ್ ನಲ್ಲಿ ಕಿಚ್ಚ ಭಾಗಿಯಾಗಿರುವ ವಿಡಿಯೋ ವೈರಲ್ ಆಗಿದೆ.

ಇದನ್ನು ಗಮನಿಸಿದರೆ ಸುದೀಪ್ ಮುಂದಿನ ಸಿನಿಮಾಗೆ ರಜನೀಕಾಂತ್ ಗೆ ಕಬಾಲಿ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಣ ಸಂಸ್ಥೆ ಜೊತೆ ಕೈ ಜೋಡಿಸಿರುವುದು ಸ್ಪಷ್ಟವಾಗಿದೆ. ಈ ಸುದ್ದಿ ಸುದೀಪ್ ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ. ಜೂನ್ ಮೊದಲ ವಾರದಲ್ಲಿ ಚಿತ್ರದ ಬಗ್ಗೆ ಅಧಿಕೃತವಾಗಿ ಘೋಷಣೆ ಹೊರಬೀಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ