ರಿಯಲ್ ಆಗಿ ಶೂಟ್ ಮಾಡಿದ ರಾಕಿಂಗ್ ಸ್ಟಾರ್ ಯಶ್

ಗುರುವಾರ, 29 ಸೆಪ್ಟಂಬರ್ 2022 (16:40 IST)
ಬೆಂಗಳೂರು: ರಾಕಿಂಗ್ ‍ಸ್ಟಾರ್ ಯಶ್ ಕೆಜಿಎಫ್ ಸಿನಿಮಾದಲ್ಲಿ ರಾಕಿ ಭಾಯ್ ಆಗಿ ಗನ್ ಹಿಡ್ಕೊಂಡು ಶೂಟಿಂಗ್ ಮಾಡಿದ್ದು ಅಭಿಮಾನಿಗಳಿಗೆ ರೋಮಾಂಚನ ತಂದಿತ್ತು.

ಈಗ ಯಶ್ ತಾವು ರಿಯಲ್ ಲೈಫ್ ನಲ್ಲೂ ಶೂಟಿಂಗ್ ಮಾಡುತ್ತಿರುವ ವಿಡಿಯೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.  ಆಮೂಲಕ ಶೂಟಿಂಗ್ ನಲ್ಲೂ ತಾವು ಪ್ರವೀಣ ಎಂದು ತೋರಿಸಿಕೊಟ್ಟಿದ್ದಾರೆ.

ಇತ್ತೀಚೆಗೆ ವಿದೇಶೀ ಪ್ರವಾಸ ಮಾಡಿದ್ದ ವೇಳೆ ಶೂಟಿಂಗ್ ಮಾಡಿದ್ದ ವಿಡಿಯೋವನ್ನು ಯಶ್ ಪ್ರಕಟಿಸಿದ್ದಾರೆ. ಈ ಮೂಲಕ ತಾವು ರಿಯಲ್ ಲೈಫ್ ನಲ್ಲೂ ಉತ್ತಮ ಗುರಿ ಇಡುವುದಾಗಿ ತೋರಿಸಿಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ