ಮೈಸೂರಿಗೆ ತೆರಳುವ ಮುನ್ನ ಅಣ್ಣನ ಕರ್ತವ್ಯ ನಿರ್ವಹಿಸಿದ ರಾಕಿಂಗ್ ಸ್ಟಾರ್ ಯಶ್
ಇಂದು ರಾಖಿ ಹಬ್ಬ. ಅಣ್ಣ-ತಂಗಿಯರ ಹಬ್ಬದ ದಿನ ಯಶ್ ಯಾವತ್ತೂ ತಂಗಿಯ ಜೊತೆ ಕಾಲ ಕಳೆಯುವುದನ್ನು ಮರೆಯುವುದಿಲ್ಲ. ಇಂದೂ ಕೂಡಾ ಮೈಸೂರಿಗೆ ತೆರಳುವ ಮೊದಲು ಯಶ್ ಗೆ ತಂಗಿ ನಂದಿನಿ ಪೂಜೆ ಮಾಡಿ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಈ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಯಶ್, ರಾಖಿ ಹಬ್ಬಕ್ಕೆ ಶುಭ ಕೋರಿದ್ದಾರೆ.