ಜೈ ಹಿಂದಿ ಎಂದು ಟ್ರೋಲ್ ಗೊಳಗಾದ ರಾಕಿಂಗ್ ಸ್ಟಾರ್ ಯಶ್

ಸೋಮವಾರ, 6 ಏಪ್ರಿಲ್ 2020 (09:51 IST)
ಬೆಂಗಳೂರು: ಪ್ರಧಾನಿ ಮೋದಿಯ ದೀಪ ಹಚ್ಚುವ  ಕರೆಗೆ ಓಗೊಟ್ಟ ರಾಕಿಂಗ್ ಸ್ಟಾರ್ ಯಶ್ ತಮ್ಮ ಮನೆಯಲ್ಲಿ ದೀಪ ಹಚ್ಚಿದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿ ಟ್ರೋಲ್ ಗೊಳಗಾಗಿದ್ದಾರೆ.


ಪುತ್ರಿ ಐರಾ ಯಶ್ ದೀಪದ ಎದುರು ಕುಣಿಯುವ ಸುಂದರ ವಿಡಿಯೋವನ್ನು ಪ್ರಕಟಿಸಿದ ಯಶ್ ಅದರ ಜತೆಗೆ ಸಂದೇಶ ಬರೆಯುವಾಗ ಜೈ ಹಿಂದ್ ಎನ್ನುವ ಬದಲು ಸ್ಪೆಲ್ಲಿಂಗ್ ತಪ್ಪಾಗಿ ಜೈ ಹಿಂದಿ ಎಂದು ಬರೆದಿದ್ದರು.

ಇದಕ್ಕೆ ಹಲವರು ಹಿಂದ್ ಓಕೆ ಹಿಂದಿಗೆ ಯಾಕೆ ಜೈ ಎಂದಿದ್ದಾರೆ. ತಮ್ಮ ತಪ್ಪಿನ ಅರಿವಾದ ತಕ್ಷಣವೇ ಯಶ್ ಸ್ಪೆಲ್ಲಿಂಗ್ ಸರಿಪಡಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರ ಸಂದೇಶ ಓದಿದ ಹಲವರು ಟ್ರೋಲ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ