ವಿಜಯೇಂದ್ರ ಬಾಹುಬಲಿಯಾದ ಗಾಯಕ ವಿಜಯ್ ಪ್ರಕಾಶ್!

ಸೋಮವಾರ, 6 ಏಪ್ರಿಲ್ 2020 (09:44 IST)
ಬೆಂಗಳೂರು: ಸರಿಗಮಪ ಶೋ ನೋಡಿದರೆ ಗಾಯಕ ವಿಜಯ್ ಪ್ರಕಾಶ್ ಎಷ್ಟು ಹಾಸ್ಯ ಪ್ರವೃತ್ತಿಯವರು ಎಂದು ಗೊತ್ತೇ ಇರುತ್ತದೆ. ಇದೀಗ ಅವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ವಿಡಿಯೋ ಒಂದನ್ನು ಹಾಕಿಕೊಂಡು ತಮ್ಮನ್ನು ತಾವೇ ಹಾಸ್ಯ ಮಾಡಿಕೊಂಡಿದ್ದಾರೆ.


ಇನ್ ಸ್ಟಾಗ್ರಾಂನಲ್ಲಿ ಹೆಗಲ ಮೇಲೊಂದು ನೀರಿನ ಬಾಟಲಿಗಳ ಕಟ್ಟು ಹಿಡಿದು ಪಕ್ಕಾ ಬಾಹುಬಲಿ ಪೋಸ್ ಕೊಟ್ಟುಕೊಂಡು ನಡೆದು ಬರುತ್ತಿರುವ ವಿಡಿಯೋ ಒಂದನ್ನು ಪ್ರಕಟಿಸಿದ ವಿಜಯ್ ಪ್ರಕಾಶ್ ‘ಕ್ವಾರಂಟೈನ್ ಬಾಹುಬಲಿ’ ಎಂದು ಬರೆದುಕೊಂಡಿದ್ದಾರೆ.

ಆದರೆ ವಿಜಯ್ ಪ್ರಕಾಶ್ ಈ ಅವತಾರ ನೋಡಿ ಕಾಮೆಂಟ್ ಮಾಡಿರುವ ಗಾಯಕಿ ವಾಣಿ ಹರಿಕೃಷ್ಣ ‘ವಿಜಯೇಂದ್ರ ಬಾಹುಬಲಿ’ ಎಂದು ತಮಾಷೆ ಮಾಡಿದ್ದಾರೆ. ಅಷ್ಟೇ ಅಲ್ಲ, ವಿಪಿ ಸರ್ ನ ಈ ಅವತಾರ ನೋಡಿ ಹಲವರು ಬಾಹುಬಲಿ ಡೈಲಾಗ್ ಬರೆದು ಕಾಮೆಂಟ್ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ