ಸಂಕಷ್ಟದಲ್ಲಿದ್ದ ಹೆಣ್ಣು ಮಕ್ಕಳ ತಾಯಿ ಪಾಲಿಗೆ ದೇವರಾದ ರೂಪೇಶ್ ಶೆಟ್ಟಿ

Sampriya

ಮಂಗಳವಾರ, 27 ಆಗಸ್ಟ್ 2024 (16:24 IST)
Photo Courtesy X
ಕನ್ನಡ ಬಿಗ್‌ಬಾಸ್ ಸೀಸನ್ 10ರ ಮೂಲಕ ನಾಡಿನ ಮನೆ ಮಾತಾಗಿರುವ ರೂಪೇಶ್ ಶೆಟ್ಟಿ ಅವರು ಈಚೆಗೆ ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇನ್ನೂ ತಮ್ಮ ಹುಟ್ಟು ಹಬ್ಬದ ದಿನ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಮನೆ ನಿರ್ಮಾಣದ ಭರವಸೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಂಗಳೂರಿನ ನಗರವೊಂದರಲ್ಲಿ ಸೋರುತ್ತಿದ್ದ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ಮೂರು ಹೆಣ್ಣು ಮಕ್ಕಳ ತಾಯಿಯ ಕಣ್ಣೀರಿಗೆ ನಟ ರೂಪೇಶ್ ಶೆಟ್ಟಿ ಅವರು ಸ್ಪಂದಿಸಿ, ಅವರಿಗೆ ಮನೆ ನಿರ್ಮಾಣ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು ಸಂಕಷ್ಟದಲ್ಲಿರುವ ಕುಟುಂಬವೊಂದಕ್ಕೆ ನೆರವಾಗುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ತನ್ನ ಬರ್ತಡೇ ಹಿನ್ನೆಲೆ ಈ ಬಾರಿ ಸುಸಜ್ಜಿತವಾದ ಮನೆಯಿಲ್ಲದೆ ಮೂರು ಹೆಣ್ಣು ಮಕ್ಕಳೊಂದಿಗೆ ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ತಾಯಿಗೆ ಮನೆ ನಿರ್ಮಾಣ ಮಾಡಿಕೊಡುವ ಭರವಸೆಯನ್ನು ನೀಡಿದ್ದಾರೆ.

ಹಾಯ್ ಎಲ್ಲರಿಗೂ ನಮಸ್ಕಾರ, ಈ ಬಾರಿಯ ಬರ್ತಡೇಯನ್ನು ಬೇರೆ ರೀತಿ, ಒಳ್ಳೆಯ ಉದ್ದೇಶದೊಂದಿಗೆ ಮಾಡಲು ಇಚ್ಛಿಸುತ್ತೇನೆ. ಒಂದು ತುಂಬಾ ಕಷ್ಟದಲ್ಲಿರುವ ಕುಟುಂಬಕ್ಕೆ, ಮಳೆ ಬಂದಾಗ ತುಂಬಾ ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬಕ್ಕೆ ಮನೆಯನ್ನು ಕಟ್ಟಿಕೊಡಬೇಕೆಂಬ ನಿರ್ಧಾರವನ್ನು ನಾನು ಮತ್ತು ನನ್ನ ತಂಡ ನಿರ್ಧಾರವನ್ನು ಕೈಗೊಂಡಿದ್ದೇವೆ.

ಬರ್ತಡೇ ದಿವಸ ನಾವೆಲ್ಲ ತುಂಬಾ ಖರ್ಚು ಮಾಡುತ್ತೇವೆ. ಹಾಗೆಯೇ ತುಂಬಾ ಜನ ಸಹಾಯದ ನಿರೀಕ್ಷೆಯಲ್ಲೂ ಇರುತ್ತಾರೆ.ಅಂತವರಿಗೆ ಕೈಯಲ್ಲಿ ಆಗುವಷ್ಟು ಸಹಾಯವನ್ನು ನೀವು ಮಾಡಿ ಎಂದು ಮನವಿ ಮಾಡಿದ್ದಾರೆ.

ಈಚೆಗೆ ರೂಪೇಶ್ ಶೆಟ್ಟಿ ಅವರ ನಟನೆಯ ತುಳು ಸಿನಿಮಾದ ಟೈಟಲ್ ಲಾಂಚ್ ತುಂಬಾನೇ ಅದ್ಧೂರಿಯಾಗಿ ನಡೆಯಿತು. ಎಲ್ಲವೂ ಅಂದುಕೊಂಡಂತೆ ನಡೆದರೆ ಅಕ್ಟೋಬರ್ ತಿಂಗಳಿನಲ್ಲಿ ಸಿನಿಮಾದ ಶೂಟಿಂಗ್ ಆರಂಭಿಸುವುದಾಗಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ