ರಾಜಕೀಯಕ್ಕೆ ಎಂಟ್ರಿಯಾಗಲು ಪವರ್ ಸ್ಟಾರ್ ಪುನೀತ್ ಗೆ ಬಂದಿತ್ತು ಆಫರ್!
ಪುನೀತ್ ರನ್ನು ರಾಜಕೀಯಕ್ಕೆ ಕರೆತರಲು ಆರ್ ಎಸ್ಎಸ್ ಮತ್ತು ಬಿಜೆಪಿ ನಾಯಕರು ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ. ಈ ಸಂಬಂಧ ನಿರ್ಮಾಪಕ ಎಸ್.ವಿ ಬಾಬು ಜೊತೆಗೆ ಆರ್ ಎಸ್ಎಸ್ ನಾಯಕರು ಪುನೀತ್ ನಿವಾಸಕ್ಕೆ ಭೇಟಿ ನೀಡಿದ್ದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೀಗಾಗಿ ಪುನೀತ್ ರನ್ನು ರಾಜಕೀಯಕ್ಕೆ ಕರೆತರಲು ಪ್ರಯತ್ನ ನಡೆಸಲಾಗಿತ್ತು ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ಸಾಮಾಜಿಕವಾಗಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಲ್ಲದೆ, ಸಿನಿಮಾ ಮೂಲಕವೂ ಎಲ್ಲಾ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದ ಯುವರತ್ನನನ್ನು ಕರೆತರಲು ನಾಯಕರು ಎಲ್ಲಾ ಪ್ರಯತ್ನ ನಡೆಸಿದ್ದರು ಎಂಬುದಂತೂ ಇದೀಗ ಸ್ಪಷ್ಟ.