ಗಾರ್ಗಿಯಾಗಿ ಕನ್ನಡಕ್ಕೆ ಬರುತ್ತಿದ್ದಾರೆ ಸಾಯಿ ಪಲ್ಲವಿ: ಇಂದು ಸಿನಿಮಾ ರಿಲೀಸ್

ಶುಕ್ರವಾರ, 15 ಜುಲೈ 2022 (08:40 IST)
ಬೆಂಗಳೂರು: ಟಾಲಿವುಡ್ ಸೂಪರ್ ಸ್ಟಾರ್ ನಾಯಕಿ ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಗಾರ್ಗಿ ಸಿನಿಮಾ ಇಂದಿನಿಂದ ಬಹುಭಾಷೆಗಳಲ್ಲಿ ಬಿಡುಗಡೆಯಾಗಿದೆ.

ವಿಶೇಷವೆಂದರೆ ಈ ಸಿನಿಮಾ ಕನ್ನಡದಲ್ಲೂ ಬಿಡುಗಡೆಯಾಗುತ್ತಿದ್ದು, ನಟ ರಕ್ಷಿತ್ ಶೆಟ್ಟಿ ತಮ್ಮ ಪರಂವಾ ಸಂಸ್ಥೆ ಮೂಲಕ ಕನ್ನಡದಲ್ಲಿ ಅರ್ಪಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಸ್ವತಃ ಕನ್ನಡದಲ್ಲಿ ಡಬ್ಬಿಂಗ್ ಮಾಡಿರುವುದು ವಿಶೇಷ.

ಗಾರ್ಗಿಯ ಹೋರಾಟದ ಕತೆಯಿರುವ ಈ ಸಿನಿಮಾವನ್ನು ಕನ್ನಡದವರೇ ಆದ ಗೌತಮ್ ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ಸಾಯಿ ಪಲ್ಲವಿಯನ್ನು ಕನ್ನಡದಲ್ಲಿ ಜನ ಹೇಗೆ ಸ್ವಿಕರಿಸುತ್ತಾರೆ ಎಂಬ ಕುತೂಹಲವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ