ಯೋಗರಾಜ್ ಭಟ್ಟರ ಮತ್ತೊಂದು ಎಣ್ಣೆ ಸಾಂಗ್ ಇಂದು ರಿಲೀಸ್

ಗುರುವಾರ, 14 ಜುಲೈ 2022 (08:40 IST)
ಬೆಂಗಳೂರು: ಯೋಗರಾಜ್ ಭಟ್ ಎಣ‍್ಣೆ ಹಾಡುಗಳನ್ನು ಬರೆಯುವುದರಲ್ಲಿ ಫೇಮಸ್. ಇದುವರೆಗೆ ಬಂದ ಎಲ್ಲಾ ಕುಡುಕರ ಹಾಡುಗಳಿಗೂ ಯೋಗರಾಜ್ ಭಟ್ ಸಾಹಿತ್ ಬರೆದಿದ್ದು, ಸೂಪರ್ ಹಿಟ್ ಆಗಿವೆ.

ಇದೀಗ ಯೋಗರಾಜ್ ಭಟ್ ತಮ್ಮದೇ ನಿರ್ದೇಶನ ಗಾಳಿಪಟ 2 ಸಿನಿಮಾಗಾಗಿ ಎಣ್ಣೆ ಸಾಂಗ್ ಮಾಡಿದ್ದು, ಈ ಹಾಡು ಇಂದು ರಿಲೀಸ್ ಆಗುತ್ತಿದೆ.

ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ನಟಿಸಿರುವ ಗಾಳಿಪಟ 2 ಸಿನಿಮಾದ ಎಣ್ಣೆ ಹಾಡಿಗೆ ಜನಪ್ರಿಯ ಕಾಂಬಿನೇಷನ್ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿ ವಿಜಯ್ ಪ್ರಕಾಶ್ ಹಾಡಿದ್ದಾರೆ. ಈ ಹಾಡು ಇಂದು ಸಂಜೆ 5.06 ಕ್ಕೆ ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ