ಪುನೀತ್ ರಾಜ್ ಕುಮಾರ್ ಟ್ವಿಟರ್ ಖಾತೆಯಿಂದ ಬ್ಲೂ ಟಿಕ್ ಮಾಯ! ಫ್ಯಾನ್ಸ್ ಆಕ್ರೋಶ

ಗುರುವಾರ, 14 ಜುಲೈ 2022 (10:47 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಧಿಕೃತ ಟ್ವಿಟರ್ ಖಾತೆಯಿಂದ ಬ್ಲೂ ಟಿಕ್ ಮಾರ್ಕ್ ಮಾಯವಾಗಿದ್ದು, ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಟ್ವಿಟರ್ ನಲ್ಲಿ ಮೂರು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಪುನೀತ್ ಬದುಕಿದ್ದಾಗ ಟ್ವಿಟರ್ ನಲ್ಲಿ ಸಕ್ರಿಯರಾಗಿದ್ದರು.

ಆದರೆ ಈಗ ಅವರು ಬದುಕಿಲ್ಲ. ಹೀಗಾಗಿ ಟ್ವಿಟರ್ ಕೂಡಾ ನಿಷ್ಕ್ರಿಯವಾಗಿತ್ತು. ಸಾಮಾನ್ಯವಾಗಿ ಆರು ತಿಂಗಳಿಗೂ ಅಧಿಕ ಕಾಲ ಟ್ವಿಟರ್ ಖಾತೆ ನಿಷ್ಕ್ರಿಯವಾಗಿದ್ದರೆ ಬ್ಲೂ ಟಿಕ್ ಮಾರ್ಕ್ ತೆಗೆದುಹಾಕಲಾಗುತ್ತದೆ. ಆದರೆ ಪುನೀತ್ ಒಬ್ಬ ಸ್ಟಾರ್ ನಟ. ಅಷ್ಟೇ ಅಲ್ಲ ಅವರನ್ನು ದೇವರಂತೆ ಆರಾಧಿಸುವ ಅಭಿಮಾನಿಗಳಿದ್ದಾರೆ. ಹೀಗಾಗಿ ಅವರ ಟ್ವಿಟರ್ ಖಾತೆಯಿಂದ ಬ್ಲೂ ಟಿಕ್ ಮಾರ್ಕ್ ತೆಗೆದಿರುವುದು ಅವರಿಗೆ ಮಾಡಿದ ಅವಮಾನ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಿವಿಂಗ್ ಲೆಜೆಂಡ್ ಎಂದು ಪರಿಗಣಿಸಿ ಅವರ ಖಾತೆಗೆ ಬ್ಲೂ ಟಿಕ್ ಮಾರ್ಕ್ ಮರಳಿಸಬೇಕು ಎಂದು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ