ದಾಂಪತ್ಯ ಕಲಹದಿಂದ ಠಾಣೆ ಮೆಟ್ಟಿಲೇರಿದ ಸುದ್ದಿ ಬೆನ್ನಲ್ಲೇ ಬಿಗ್‌ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಶ್ರಾವಣಿ ಹಾಗೂ ಸಮೀರ್ ಆಚಾರ್ಯ ಮಗಳ ಜತೆ ಖುಷಿ ಖುಷಿಯಲ್ಲಿ ಸಮಯ ಕಳೆಯುತ್ತಿರುವುದನ್ನು ಕಾಣಬಹುದು.
ಈ ವಿಡಿಯೋಗೆ ನೆಟ್ಟಿಗರು ಬಗೆ ಬಗೆಯಾಗಿ ಕಮೆಂಟ್ ಮಾಡಿದ್ದಾರೆ. ನಿಮ್ಮ ಕುಟುಂಬದಲ್ಲಿ ಕಲಹ ಅಂತ ಕೆಲವು ಮೀಡಿಯಾದಲ್ಲಿ ಬರುತ್ತಿದೆ ಅದರ ಬಗ್ಗೆ ಕ್ಲಾರಿಟಿ ಕೊಟ್ಟು ಸಂತೋಷದಿಂದ ನೂರ್ಕಾಲ ಹೀಗೇ ನಗುನಗುತ್ತಾ ಇರಿ ಎಂದಿದ್ದಾರೆ.
ಮತ್ತೊಬ್ಬರು ನಿಮ್ ಜೀವನ ನೆಟ್ಟಗೆ ಇಟ್ಟುಕೊಳ್ಳಿ, ಲೈವ್ ಬಂದು ಉಪಾದೇಶ ಕೊಡೊದಲ್ಲ ಎಂದಿದ್ದಾರೆ.
ಏನ್ರಿ ಇದು ಒಂದು ಅರ್ಥನೇ ಆಗೋಲ್ಲ anyway god bless u both ಆಚಾರ್ ಎಂದು ಕಮೆಂಟ್ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಸಮೀರ್ ಆಚಾರ್ಯ ಅವರ ದಾಂಪತ್ಯದಲ್ಲಿ ಕಲಹ ಉಂಟಾಗಿ ಪತಿ ವಿರುದ್ಧ ಪತ್ನಿ ಶ್ರಾವಣಿ ಠಾಣೆ ಮೆಟ್ಟಿಲೇರಿದ ಹಂತಕ್ಕೆ ತಲುಪಿದೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಸಮೀರ್ ಆಚಾರ್ಯ ಅವರು ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪವನ್ನು ಅವರ ಪತ್ನಿ ಶ್ರಾವಣಿ ಮಾಡಿದ್ದಾರೆ. ಈ ಸುದ್ದಿ ಮಾದ್ಯಮದಲ್ಲಿ ಬಿತ್ತರವಾಗುತ್ತಿದ್ದ ಬೆನ್ನಲ್ಲೇ ಶ್ರಾವಣಿ ಅವರು ಪೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.