ಕೊರೋನಾ ಲಸಿಕೆ ತೆಗೆದುಕೊಂಡು ಭರವಸೆ ಕೊಟ್ಟ ಸ್ಯಾಂಡಲ್ ವುಡ್ ನಟರು

ಗುರುವಾರ, 8 ಏಪ್ರಿಲ್ 2021 (08:53 IST)
ಬೆಂಗಳೂರು: ಕೊರೋನಾ ಎರಡನೇ ಹಂತ ಜೋರಾಗಿರುವ ಬೆನ್ನಲ್ಲೇ 45 ವರ್ಷ ಮೇಲ್ಪಟ್ಟ ಸ್ಯಾಂಡಲ್ ವುಡ್ ನಟರು ಲಸಿಕೆ ಪಡೆದು ಜನರಲ್ಲಿ ಭರವಸೆ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.


ನಿನ್ನೆಯಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಲಸಿಕೆ ಪಡೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅರ್ಹರು ಲಸಿಕೆ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದರು. ಇದಕ್ಕೆ ಮೊದಲು ನವರಸನಾಯಕ ಜಗ್ಗೇಶ್ ದಂಪತಿ ಲಸಿಕೆ ಪಡೆದುಕೊಂಡಿದ್ದರು.

ನಟ ರಾಘವೇಂದ್ರ ರಾಜಕುಮಾರ್, ಹಿರಿಯ ನಟಿ ಗಿರಿಜಾ ಲೋಕೇಶ್ ಕೂಡಾ ಲಸಿಕೆ ಪಡೆದುಕೊಂಡು ನೀವೂ ಪಡೆದು ಕೊರೋನಾ ಹೋಗಲಾಡಿಸಲು ಕೈ ಜೋಡಿಸಿ ಎಂದು ಮನವಿ ಮಾಡಿದ್ದರು. ಕೆಲವರಿಗೆ ಲಸಿಕೆ ಬಗ್ಗೆ ಇನ್ನೂ ಅನುಮಾನಗಳಿವೆ. ಇಂತಹ ಸಂದರ್ಭದಲ್ಲಿ ಈ ಕಲಾವಿದರು ತಮ್ಮ ಅಭಿಮಾನಿಗಳಲ್ಲಿ ಭರವಸೆ ತುಂಬುವ ಕೆಲಸ ಮಾಡಿ ಕೊರೋನಾ ಹೋಗಲಾಡಿಸಲು ಕೈ ಜೋಡಿಸುವ ಅಗತ್ಯವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ