ಸುಮಲತಾ, ಪ್ರಧಾನಿ ಮೋದಿಗೆ ಶುಭ ಕೋರಿದ ಸ್ಯಾಂಡಲ್ ವುಡ್ ತಾರೆಯರು ಯಾರೆಲ್ಲಾ ಗೊತ್ತಾ?

ಶುಕ್ರವಾರ, 24 ಮೇ 2019 (06:50 IST)

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಸುಮಲತಾ ಅಂಬರೀಶ್ ಗೆ ಚಿತ್ರರಂಗದ ಆಪ್ತರು ಶುಭ ಹಾರೈಸಿದ್ದಾರೆ.

ಅದರಲ್ಲೂ ಡಾಟರ್ ಆಫ್ ಪಾರ್ವತಮ್ಮ ನಟಿ ಹರಿಪ್ರಿಯಾ ಟ್ವಿಟರ್ ಮೂಲಕ ವಿಶೇಷ ಅಭಿನಂದನೆ ಸಲ್ಲಿಸಿದ್ದು, ‘ಮಮ್ಮಿ... ತುಂಬಾ ಖುಷಿಯಾಗುತ್ತಿದೆ. ನಿಮ್ಮ ಈ ದೊಡ್ಡ ಗೆಲುವು ನಿರೀಕ್ಷಿತ ಮತ್ತು ಅಭಿನಂದನೆ’ ಎಂದು ಬರೆದುಕೊಂಡಿದ್ದಾರೆ. ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಕೂಡಾ ಅಭಿನಂದನೆ ಸಲ್ಲಿಸಿದ್ದಾರೆ.

 

ಇನ್ನು, ನಟಿ ಹರ್ಷಿಕಾ ಪೂಣಚ್ಚ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇ‍ಶ್ ಕೂಡಾ ಮತ್ತೆ ಅಧಿಕಾರಕ್ಕೆ ಬಂದ ಪ್ರಧಾನ ಮಂತ್ರಿ ಮೋದಿಜಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ. ಬಿಜೆಪಿ ನಾಯಕರೂ ಆಗಿರುವ ಜಗ್ಗೇಶ್ ಸರಣಿ ಟ್ವೀಟ್ ಗಳ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ