ರಚಿತಾ ರಾಮ್ ನಿರಾಕರಿಸಿದ ಜಾಗಕ್ಕೆ ಬಂದ ಸಾನ್ವಿ ಶ್ರೀವಾಸ್ತವ್

ಭಾನುವಾರ, 27 ಸೆಪ್ಟಂಬರ್ 2020 (08:55 IST)
ಬೆಂಗಳೂರು: ಹಿರಿಯ ನಿರ್ದೇಶಕ ದಿನೇಶ‍್ ಬಾಬು ನಿರ್ದೇಶನದ ‘ಕಸ್ತೂರಿ ಮಹಲ್’ ಸಿನಿಮಾದಿಂದ ರಚಿತಾ ರಾಮ್ ಹೊರಬಂದ ಸುದ್ದಿ ಕೇಳಿರುತ್ತೀರಿ. ಈಗ ಆ ಜಾಗಕ್ಕೆ ಹೊಸ ನಾಯಕಿಯ ಆಗಮನವಾಗಿದೆ.


ಕಸ್ತೂರಿ ಮಹಲ್ ಸಿನಿಮಾದ ನಾಯಕಿ ಪಾತ್ರಕ್ಕೆ ಈಗ ಸಾನ್ವಿ ಶ್ರೀವಾಸ್ತವ್ ಬಂದಿದ್ದಾರೆ. ಈ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣ ಪುಟದ ಮೂಲಕ ತಿಳಿಸಿರುವ ಸಾನ್ವಿ ಹಿರಿಯ ನಿರ್ದೇಶಕ ದಿನೇಶ್ ಬಾಬು ಸಿನಿಮಾದಲ್ಲಿ ನಟಿಸುತ್ತಿರುವುದು ಸಂತೋಷ ತಂದಿದೆ. ಇದು ನನ್ನ ಮೊದಲ ಕನ್ನಡದ ಹಾರರ್ ಸಿನಿಮಾವಾಗಲಿದೆ. ಇನ್ನೂ ಅನೇಕ ಒಳ್ಳೆಯ ಸಿನಿಮಾಗಳ ನಿರೀಕ್ಷೆಯಲ್ಲಿದ್ದೇನೆ ಎಂದು ಸಾನ್ವಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ