ರಾಮಾಯಣ ‘ಸೀತೆ’ ಜತೆ ಮಾಜಿ ಪ್ರಧಾನಿ ವಾಜಪೇಯಿ ಫೋಟೋ ವೈರಲ್

ಬುಧವಾರ, 22 ಏಪ್ರಿಲ್ 2020 (10:52 IST)
ನವದೆಹಲಿ: ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರವಾಹಿ ಎಷ್ಟು ಜನಪ್ರಿಯವಾಗಿತ್ತು ಎಂದರೆ ಆ ಪಾತ್ರಧಾರಿಗಳೇ ನಿಜವಾದ ಸೀತೆ, ರಾಮ ಎನ್ನುವಷ್ಟರ ಮಟ್ಟಿಗೆ ಜನ ನಂಬಿಕೆಯಿಟ್ಟಿದ್ದರು.


ಈ ಧಾರವಾಹಿ ಈಗ ಮರಳಿ ಪ್ರಸಾರವಾಗುತ್ತಿದ್ದು, ಅಷ್ಟೇ ಪಾಪ್ಯುಲರ್ ಆಗಿದೆ. ಇದೀಗ ಧಾರವಾಹಿಯಲ್ಲಿ ಸೀತೆಯ ಪಾತ್ರ ಮಾಡುತ್ತಿರುವ ದೀಪಿಕಾ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜತೆಗಿರುವ ಫೋಟೋವೊಂದನ್ನು ಪ್ರಕಟಿಸಿದ್ದು ವೈರಲ್ ಆಗಿದೆ.

ದೀಪಿಕಾ ಫೋಟೋ ಜತೆಗೆ ‘ಒಬ್ಬ ಶ್ರೇಷ್ಠ ವ್ಯಕ್ತಿಯ ಭೇಟಿಯಾದ ಕ್ಷಣ’ ಎಂದು ಫೋಟೋ ಜತೆಗೆ ಬರೆದುಕೊಂಡಿದ್ದಾರೆ. ಇದನ್ನು ನೋಡಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ