ಸಿದ್ಧಾಂತ್ ಕಪೂರ್ ಡ್ರಗ್ಸ್ ಪ್ರಕರಣ: ಇದು ಸಾಧ್ಯವೇ ಇಲ್ಲ ಎಂದ ತಂದೆ ಶಕ್ತಿ ಕಪೂರ್
ಈ ಸಂಬಂಧ ಸಿದ್ದಾಂತ್ ಹಾಗೂ ಇತರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾರ್ಟಿಯಲ್ಲಿ ಭಾಗವಹಿಸಿದ್ದ ಉಳಿದವರ ಸ್ಯಾಂಪಲ್ ನ್ನೂ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಸಿದ್ಧಾಂತ್ ಸೇರಿದಂತೆ ಆರು ಮಂದಿ ಡ್ರಗ್ಸ್ ಸೇವಿಸಿವುದು ದೃಢವಾಗಿತ್ತು.
ಸಿದ್ಧಾಂತ್ ಕಪೂರ್ ಖ್ಯಾತ ಬಾಲಿವುಡ್ ನಟ ಶಕ್ತಿ ಕಪೂರ್ ಪುತ್ರ. ಇದೀಗ ಪುತ್ರ ಡ್ರಗ್ಸ್ ಕೇಸ್ ನಲ್ಲಿ ಸಿಲುಕಿಕೊಂಡ ಬಗ್ಗೆ ಮಾಧ‍್ಯಮಗಳು ಪ್ರಶ್ನಿಸಿದಾಗ ಶಕ್ತಿ ಕಪೂರ್ ಇದೆಲ್ಲಾ ಸಾಧ‍್ಯವೇ ಇಲ್ಲ ಎಂದಷ್ಟೇ ಸದ್ಯಕ್ಕೆ ನಾನು ಹೇಳಬಲ್ಲೆ ಎಂದಿದ್ದಾರೆ.