12 ವರ್ಷಗಳಲ್ಲಿ 80 ಸಿನಿಮಾ ಮಾಡಿದ್ದ ಶಂಕರ್ ನಾಗ್ ನಿಂದ ಇಂದಿನ ನಟರು ಕಲಿಯಬೇಕಾದ್ದು ತುಂಬಾ ಇದೆ

Krishnaveni K

ಶನಿವಾರ, 9 ನವೆಂಬರ್ 2024 (12:17 IST)
ಬೆಂಗಳೂರು: ದಿವಂಗತ ನಟ, ನಿರ್ದೇಶಕ ಶಂಕರ್ ನಾಗ್ ಅವರ ಜನ್ಮ ದಿನ ಇಂದು ಅವರು ಬದುಕಿದ್ದರೆ ಅವರಿಗೆ 70 ವರ್ಷ ವಯಸ್ಸಾಗಿರುತ್ತಿತ್ತು. ಆದರೆ ದುರದೃಷ್ಟವಶಾತ್ ಕಿರಿಯ ವಯಸ್ಸಿನಲ್ಲೇ ಅಪಘಾತದಲ್ಲಿ ಕಾಲವಾದರು.

ಚಿಕ್ಕ ವಯಸ್ಸಿನಲ್ಲೇ ನಮ್ಮನ್ನಗಲಿದರೂ ಕನ್ನಡ ಚಿತ್ರರಂಗ ಇರುವವರೆಗೂ ಅವರ ನೆನಪು ಉಳಿಯುವಂತೆ ಮಾಡಿ ಹೋದರು. ಶಂಕರ್ ನಾಗ್ ಚಿತ್ರರಂಗದಲ್ಲಿದ್ದಿದ್ದು 12 ವರ್ಷ ಮಾತ್ರ. ಆದರೆ 12 ವರ್ಷದಲ್ಲಿ ಅವರು ಮಾಡಿದ್ದು ಬರೋಬ್ಬರಿ 80 ಸಿನಿಮಾಗಳನ್ನು. ನಟನಾಗಿ, ನಿರ್ದೇಶಕನಾಗಿ, ಬರಹಗಾರನಾಗಿ ಸಕ್ರಿಯವಾಗಿ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡವರು.

ದಣಿವು, ವಿಶ್ರಾಂತಿ ಎಂದರೆ ಏನು ಎಂದೇ ಗೊತ್ತಿಲ್ಲದಂತೆ ಸಿನಿಮಾಗಾಗಿ ದುಡಿದವರು ಶಂಕರ್ ನಾಗ್. ಅವರ ಯೋಚನೆ, ಯೋಜನೆಗಳು ಅಂದೇ 50 ವರ್ಷದಷ್ಟು ಮುಂದೆ ಇತ್ತು. ಮೆಟ್ರೋ ಬಗ್ಗೆ ಅಂದೇ ಕನಸು ಕಂಡಿದ್ದರು. ಶಂಕರ್ ನಾಗ್ ಅವರಿಂದ ಇಂದಿನ ನಟರು ಕಲಿಯಬೇಕಾದ ವಿಚಾರಗಳು ತುಂಬಾ ಇದೆ.

ಇಂದಿನ ನಟರು ಒಂದು ಸಿನಿಮಾ ಹಿಟ್ ಆದರೆ ಸಾಕು ಮತ್ತೊಂದು ಸಿನಿಮಾ ಮಾಡಲು ಎರಡರಿಂದ ಮೂರು ವರ್ಷ ಬೇಕು. ಆದರೆ ಶಂಕರ್ ನಾಗ್ ಹಾಗಲ್ಲ. ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡ ನಟರಾದರೂ ಕಡಿಮೆ ಬಜೆಟ್ ನಲ್ಲಿ ಸಾಂಸಾರಿಕವಾಗಿ ಕೂತು ನೋಡುವಂತಹ, ಯುವಕರನ್ನು ಸೆಳೆಯುವಂತಹ ಅನೇಕ ಸಿನಿಮಾಗಳನ್ನು ಮಾಡಿ ತಮ್ಮ ಜೊತೆಗೆ ಚಿತ್ರರಂಗವನ್ನೂ ಗೆಲ್ಲಿಸಿದವರು. ಅದಕ್ಕೇ ಅವರು ಇಂದಿಗೂ ಕನ್ನಡ ಚಿತ್ರ ರಸಿಕರ ಮನಸ್ಸಿನಲ್ಲಿ ಅಜರಾಮರಾಗಿ ಉಳದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ