ಕ್ಯಾನ್ಸರ್‌ ಗೆದ್ದ ಬಳಿಕ ಮತ್ತೆ ಶೂಟಿಂಗ್‌ನತ್ತ ಶಿವಣ್ಣ: 131ನೇ ಸಿನಿಮಾಕ್ಕೆ ನಾಳೆ ಹ್ಯಾಟ್ರಿಕ್‌ ಹೀರೊ ಎಂಟ್ರಿ

Sampriya

ಭಾನುವಾರ, 2 ಮಾರ್ಚ್ 2025 (14:23 IST)
Photo Courtesy X
ಬೆಂಗಳೂರು: ಅಮೆರಿಕಾದ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಬಂದಿರುವ ಹ್ಯಾಟ್ರಿಕ್‌ ಹೀರೊ ಶಿವರಾಜ್‌ ಕುಮಾರ್‌ ಮತ್ತೆ ಹಳೆಯ ಖದರ್‌ಗೆ ವಾಪಸ್‌ ಬಂದಿದ್ದು, ಶೂಟಿಂಗ್‌ನತ್ತ ಮುಖಮಾಡಿದ್ದಾರೆ.

ಈತನಕ ವಿಶ್ರಾಂತಿಗೆ ಜಾರಿದ್ದ ಅವರು ಸಿನಿಮಾ ಕೆಲಸವನ್ನು ಮತ್ತೆ ಕೈಗೆತ್ತಿಕೊಂಡಿದ್ದಾರೆ. ಶಿವಣ್ಣ ನಟಿಸುತ್ತಿರುವ 131ನೇ ಸಿನಿಮಾ ಚಿತ್ರೀಕರಣ ಕಾರ್ಯ ಸೋಮವಾರದಿಂದಲೇ ಆರಂಭವಾಗಲಿದೆ.

ಈ ಸಿನಿಮಾದ ಮೊದಲ ಹಂತದ ಶೂಟಿಂಗ್ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಇದೀಗ ಎರಡನೇ ಹಂತದ ಚಿತ್ರೀಕರಣ ಸೋಮವಾರದಿಂದ ನಡೆಯುತ್ತಿದೆ. ಎಂದಿನ ಎನರ್ಜಿಯಲ್ಲಿ ಶಿವಣ್ಣ ನಾಳೆ ಶೂಟಿಂಗ್‌ ಸೆಟ್‌ಗೆ ಲಗ್ಗೆ ಹಾಕಲಿದ್ದಾರೆ.

ಕಾಲಿವುಡ್‌ ನಿರ್ದೇಶಕ ಕಾರ್ತಿಕ್ ಅದ್ವೈತ್ ಸಾರಥ್ಯದಲ್ಲಿ ಶಿವಣ್ಣ ಅವರ 131ನೇ ತಯಾರಾಗುತ್ತಿದೆ.  62 ವರ್ಷ ವಯಸ್ಸಿನ ಶಿವಣ್ಣ ಈ ಸಿನಿಮಾದಲ್ಲಿ ದೇವ ಎಂಬ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

ಇಷ್ಟು ಮಾತ್ರವಲ್ಲದೆ ಮಾರ್ಚ್‌ 5ರಿಂದ ಹೈದರಾಬಾದ್‌ನಲ್ಲಿ ರಾಮ್‌ ಚರಣ್‌ ನಟನೆಯ ಸಿನಿಮಾದಲ್ಲಿ ಶಿವಣ್ಣ ಬಣ್ಣ ಹಚ್ಚಲಿದ್ದಾರೆ. ಬಳಿಕ ಜೈಲರ್‌ 2 ಮತ್ತು ಧ್ರುವ ಸರ್ಜಾ ಅವರ ಕೆಡಿ ಸಿನಿಮಾದಲ್ಲೂ ಶಿವಣ್ಣ ಗೌರವ ಪಾತ್ರಕ್ಕೆ ಜೀವತುಂಬಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ