Kamal Hassan: ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದ್ದು ಎನ್ನುವಾಗ ಶಿವಣ್ಣ ರಿಯಾಕ್ಷನ್ ವಿಡಿಯೋ ನೋಡಿ
ಥಗ್ಸ್ ಆಫ್ ಲೈಫ್ ಸಿನಿಮಾ ಈವೆಂಟ್ ನಲ್ಲಿ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿತು ಎಂದ ಮಾತು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಕನ್ನಡ ಭಾಷೆಗೆ ಅವಮಾನ ಮಾಡಿದ ಕಮಲ್ ಹಾಸನ್ ಕ್ಷಮೆ ಕೇಳಬೇಕು ಎಂದು ಕನ್ನಡ ಪರ ಸಂಘಟನೆಗಳು ಈಗ ಭಾರೀ ಪ್ರತಿಭಟನೆ ನಡೆಸುತ್ತಿವೆ.
ಇದೀಗ ಕರ್ನಾಟಕದಲ್ಲಿ ಕಮಲ್ ಸಿನಿಮಾ ಅಡ್ಡಿಯಾಗುವ ಸಾಧ್ಯತೆಯಿದೆ. ಕಮಲ್ ಈ ಮಾತು ಹೇಳುವಾಗ ಕನ್ನಡ ನಟ ಶಿವರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಅಲ್ಲೇ ಕೂತಿದ್ದರು ಎನ್ನುವುದು ಇನ್ನೊಂದು ಶಾಕಿಂಗ್ ವಿಚಾರ.
ಕಮಲ್ ತಮ್ಮ ಮುಖ ನೋಡುತ್ತಾ ಈ ಮಾತು ಹೇಳುವಾಗ ಶಿವಣ್ಣ ತಲೆ ಅಲ್ಲಾಡಿಸಿದ್ದು ಈಗ ಮತ್ತಷ್ಟು ವಿವಾದ ಹುಟ್ಟು ಹಾಕಿದೆ. ಕಮಲ್ ಈ ರೀತಿ ಮಾತನಾಡುತ್ತಿದ್ದರೆ ಶಿವಣ್ಣ ಯಾಕೆ ಮೌನವಾಗಿದ್ದರು ಎಂದು ಆಕ್ರೋಶ ಕೇಳಿಬಂದಿದೆ. ಕಮಲ್ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ.