ಭಾರತ ಪರ ಸಿನಿಮಾ ಮಾಡಿದ್ದಕ್ಕೆ ಜಮ್ಮುವಿನಲ್ಲಿ ಗಲಾಟೆ ಮಾಡಿದ್ದರು: ಶಿವಣ್ಣ ಬಿಚ್ಚಿಟ್ಟ ಕಟು ಸತ್ಯ

ಶುಕ್ರವಾರ, 18 ಆಗಸ್ಟ್ 2017 (18:21 IST)
ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶದ್ರೋಹಿಗಳ ಕೃತ್ಯದ ಬಗ್ಗೆ ನಾವು ನಿತ್ಯ ಸುದ್ದಿಗಳನ್ನ ಕೇಳುತ್ತಿರುತ್ತೇವೆ. ಸೇನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಉದಾಹರಣೆಗಳಿವೆ. ನಮ್ಮ ದೇಶದ ಅನ್ನ ತಿಂದು ದೇಶದ ವಿರುದ್ಧ ಧ್ವನಿ ಎತ್ತುವ ದುಷ್ಕರ್ಮಿಗಳು ಅಲ್ಲಿದ್ದಾರೆ. ಇದರ ಅನುಭವ ಇತ್ತೀಚೆಗೆ ತೆರೆ ಕಂಡ ಮಾಸ್ ಲೀಡರ್ ಚಿತ್ರತಂಡಕ್ಕೂ ಆಗಿದೆ.

ಶಿವಣ್ಣ ಅಭಿನಯದ ಯೋಧರ ಕಥೆ ಒಳಗೊಂಡಿರುವ ಮಾಸ್ ಲೀಡರ್ ಸಿನಿಮಾ ಜಮ್ಮು ಕಾಶ್ಮೀರದಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಭಾರತದ ಪರ ಸಿನಿಮಾ ಮಾಡುತ್ತೀರಾ ಎಂದು ಚಿತ್ರತಂಡದ ಮೇಲೆ ಕೆಲವರು ಜಗಳ ಮಾಡಿದ್ದರಂತೆ. ಅಲ್ಲೇ ಇದ್ದ ಕೆಲ ದೇಶಪ್ರೇಮಿಗಳು ಅವರನ್ನ ಹಿಮ್ಮೆಟ್ಟಿಸಿ ಚಿತ್ರತಂಡವನ್ನ ಕಾಪಾಡಿದರಂತೆ.

ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಸ್ವತಃ ಶಿವಣ್ಣ ಈ ಕಹಿ ಘಟನೆಯನ್ನ ಬಿಚ್ಚಿಟ್ಟಿದ್ದಾರೆ.  ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಯಾವ ರೀತಿ ಇದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ