ಸೈಮಾ ವೇದಿಕೆಯಲ್ಲಿ ಕಣ್ಣೀರು ಹಾಕಿದ ಶಿವರಾಜ್ ಕುಮಾರ್

ಭಾನುವಾರ, 11 ಸೆಪ್ಟಂಬರ್ 2022 (10:20 IST)
ಬೆಂಗಳೂರು: ಪ್ರತಿಷ್ಠಿತ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭದ ವೇದಿಕೆಯಲ್ಲಿ ನಟ ಶಿವರಾಜ್ ಕುಮಾರ್ ಭಾವುಕರಾಗಿ ಕಣ್ಣೀರು ಹಾಕಿದ ಘಟನೆ ನಡೆಯಿತು.

ಪುನೀತ್ ರಾಜ್ ಕುಮಾರ್ ಗೌರವಾರ್ಥ ಸೈಮಾವನ್ನು ಈ ಬಾರಿ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಹೀಗಾಗಿ ವೇದಿಕೆಯಲ್ಲಿ ಪುನೀತ್ ಗೆ ವಿಶೇಷ ಗೌರವ ನೀಡಲಾಯಿತು.

ಈ ವೇಳೆ ವೇದಿಕೆ ಶಿವರಾಜ್ ಕುಮಾರ್ ಸೇರಿದಂತೆ ಇಡೀ ದೊಡ್ಮನೆ ಕುಟುಂಬವನ್ನು ವೇದಿಕೆಗೆ ಕರೆಸಿ ಗೌರವಿಸಲಾಯಿತು. ಈ ವೇಳೆ ಪುನೀತ್ ವಿಡಿಯೋ ನೋಡಿ ಶಿವಣ್ಣ ಮತ್ತು ಇಡೀ ಕುಟುಂಬ ವೇದಿಕೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ