ತಲೈವಾ ರಜನಿ ಜೊತೆ ಶಿವಣ್ಣ ಸಿನಿಮಾ ಪಕ್ಕಾ: ಸೆಪ್ಟೆಂಬರ್ ನಲ್ಲಿ ಶೂಟಿಂಗ್

ಬುಧವಾರ, 8 ಜೂನ್ 2022 (11:19 IST)
ಬೆಂಗಳೂರು: ಸೂಪರ್ ಸ್ಟಾರ್ ರಜನೀಕಾಂತ್ ಜೊತೆ ಶಿವರಾಜ್ ಕುಮಾರ್ ಮುಂದಿನ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಅದೀಗ ಖಚಿತವಾಗಿದೆ.

ಸ್ವತಃ ಶಿವಣ್ಣ ಸಂದರ್ಶನವೊಂದರಲ್ಲಿ ರಜನಿ ಸರ್ ಜೊತೆ ನಾನು ನಟಿಸುವುದು ಪಕ್ಕಾ ಎಂದಿದ್ದಾರೆ. ರಜನೀಕಾಂತ್ ಅವರನ್ನು ಚಿಕ್ಕಂದಿನಿಂದ ನೋಡುತ್ತಾ ಬೆಳೆದಿದ್ದೇನೆ. ಈಗ ಪಾತ್ರ ಏನೇ ಇರಲಿ, ಹಿರಿಯ ನಟನ ಜೊತೆ ನಟಿಸುವ ಅವಕಾಶ ಸಿಕ್ಕಿರುವುದೇ ನನ್ನ ಅದೃಷ್ಟ ಎಂದಿದ್ದಾರೆ ಶಿವಣ್ಣ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ರಜನಿ 169 ಸಿನಿಮಾ ಆಗಸ್ಟ್ ನಿಂದ ಆರಂಭವಾಗಲಿದ್ದು, ಶಿವಣ್ಣ ಸೆಪ್ಟೆಂಬರ್ ನಲ್ಲಿ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರಂತೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಶಿವಣ್ಣ ಭಾಗದ ಚಿತ್ರೀಕರಣ ನಡೆಯುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ