ನವಜಾತ ಮಗುವಿಗೆ ಪುನೀತ್ ಹೆಸರಿಟ್ಟ ಶಿವರಾಜ್ ಕುಮಾರ್

ಶುಕ್ರವಾರ, 18 ಮಾರ್ಚ್ 2022 (08:50 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಈ ವಾರ ಪುನೀತ್ ರಾಜ್ ಕುಮಾರ್ ಗೌರವಾರ್ಥ ವಿಶೇಷ ಸಂಚಿಕೆ ಮಾಡಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ನಟ ಶಿವರಾಜ್ ಕುಮಾರ್ ಪಾಲ್ಗೊಳ್ಳುತ್ತಿದ್ದಾರೆ. ಪ್ರೀತಿಯ ತಮ್ಮ ಅಪ್ಪು ಬಗ್ಗೆ ಶಿವಣ್ಣ ಅನೇಕ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.

ಜೊತೆಗೆ ಕಾರ್ಯಕ್ರಮದಲ್ಲಿ ಪುನೀತ್ ಅಪ್ಪಟ ಅಭಿಮಾನಿ ದಂಪತಿಯೊಬ್ಬರ ನವಜಾತ ಮಗುವಿಗೆ ಸ್ವತಃ ಶಿವಣ್ಣ ಪುನೀತ್ ಎಂದು ನಾಮಕರಣ ಮಾಡಲಿದ್ದಾರೆ. ಈ ಕಾರ್ಯಕ್ರಮ ಈ ವಾರಂತ್ಯದಲ್ಲಿ ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ