ಮೈಸೂರಿನಲ್ಲಿ ಜೇಮ್ಸ್ ವೀಕ್ಷಿಸಲಿರುವ ಶಿವಣ್ಣ
ಶಿವರಾಜ್ ಕುಮಾರ್ ಇದೀಗ ಮೈಸೂರಿನಲ್ಲಿದ್ದು, ಇಂದು ಸಂಜೆ 4 ಗಂಟೆಗೆ ಮೈಸೂರಿನ ಸರಸ್ವತಿಪುರಂನಲ್ಲಿ ತಮ್ಮ ಸ್ನೇಹಿತರ ಜೊತೆ ಕುಳಿತು ಸಿನಿಮಾ ವೀಕ್ಷಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು, ಪುನೀತ್ ಸಿನಿಮಾವನ್ನು ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡಿ ಭಾವುಕರಾಗಿದ್ದಾರೆ. ಕೆಲವರು ಚಿತ್ರಮಂದಿರದಲ್ಲಿ ಅಪ್ಪುವನ್ನು ನೋಡಿ ಕಣ್ಣೀರು ಸುರಿಸಿದ್ದಾರೆ.