ದೈವ ಸಂಕಲ್ಪ ಯೋಜನೆ ಚಾಲನೆ

ಬುಧವಾರ, 16 ಮಾರ್ಚ್ 2022 (18:55 IST)

ಸಮಗ್ರ ದೇವಾಲಯ ನಿರ್ವಹಣೆ ಮತ್ತು ದೈವ ಸಂಕಲ್ಪ ಯೋಜನೆಯಡಿ ಮೊದಲ ಹಂತವಾಗಿ ಎ ಶ್ರೇಣಿಯ 25 ದೇಗುಲಗಳನ್ನು ಪರಿಗಣಿಸಲಾಗಿದೆ. ಬಳಿಕ ಹಂತ ಹಂತವಾಗಿ ಬಿ ಮತ್ತು ಸಿ ಶ್ರೇಣಿಯ ದೇವಾಲಯಗಳನ್ನೂ ಪರಿಗಣಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.

ವಿಧಾನಪರಿಷತ್​ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಶಶಿಲ್ ನಮೋಶಿ ಸಮಗ್ರ ದೇವಾಲಯ ನಿರ್ವಹಣೆ ಮತ್ತು ದೈವ ಸಂಕಲ್ಪ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಸಚಿವೆ ಶಶಿಕಲಾ ಜೊಲ್ಲೆ ಪರವಾಗಿ ಅಶೋಕ್​ ಉತ್ತರ ನೀಡಿದರು. ಯೋಜನೆಯಡಿ‌ ಇಡೀ ರಾಜ್ಯದಲ್ಲಿ 31 ಜಿಲ್ಲೆಯಲ್ಲಿ 25 ಎ ಗ್ರೇಡ್ ದೇಗುಲ ಗುರುತು ಮಾಡಲಾಗಿದೆ.

ಎರಡನೇ, ಮೂರನೇ ಹಂತದ ದೇವಾಲಯಗಳನ್ನೂ ಪರಿಗಣಿಸಲಾಗುತ್ತದೆ. ಹೆಚ್ಚು ಆದಾಯ ಬರುವ ದೇವಾಲಯಗಳಿಗೆ ಮೊದಲ ಆದ್ಯತೆ ನೀಡಿದ್ದು, ಎರಡನೇ ಹಂತದ ಆದಾಯ ಬರುವ ದೇವಸ್ಥಾನಕ್ಕೆ ಎರಡನೇ ಆದ್ಯತೆ ನೀಡಲಾಗುತ್ತದೆ. ನಂತರ‌ ಎಲ್ಲಾ ದೇಗುಲಗಳನ್ನು ಪರಿಗಣಿಸಲಾಗುತ್ತದೆ ಎಂದರು.

ಪರಿಷತ್‌ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿರುವ ಕಂದಾಯ ಸಚಿವ ಆರ್.ಅಶೋಕ್..

ಸದ್ಯ ಯೋಜನೆ ಆರಂಭ ಮಾಡಿದ್ದೇವೆ ಅಷ್ಟೇ, ಹಂತ ಹಂತವಾಗಿ ಎಲ್ಲಾ ದೇವಾಲಯಗಳನ್ನೂ ಯೋಜನೆಗೆ ಪರಿಗಣಿಸಲಾಗುತ್ತದೆ. ಈಗ ಕಲ್ಯಾಣ ಕರ್ನಾಟಕ ಭಾಗದ ಒಂದು ದೇವಾಲಯ ಪರಿಗಣಿಸಿದ್ದು, ನಂತರದ ದಿನಗಳಲ್ಲಿ ಉಳಿದ ದೇವಾಲಯಗಳನ್ನೂ ಪರಿಗಣಿಸಲಾಗುತ್ತದೆ ಎಂದು ಉತ್ತರ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ