ಬೆಂಗಳೂರು ರಸ್ತೆ ಸೇಫ್ ಅಲ್ಲ

ಬುಧವಾರ, 16 ಮಾರ್ಚ್ 2022 (18:46 IST)
.ಮೀ ಸರಾಸರಿ 19-20 ಅಪಾಯಗಳನ್ನು ಹೊಂದಿರುವ ಬಿಬಿಎಂಪಿ ರಸ್ತೆಗಳು ರಸ್ತೆ ಬಳಕೆದಾರರಿಗೆ ಅತ್ಯಂತ ಅಪಾಯಕಾರಿ ಎಂದು ತಿಳಿದುಬಂದಿದೆ
ಭಾರತ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ ವರದಿ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಕಾರ್ಯ ನರ್ವಿಹಣೆಯ ಕಾರ್ಯಕ್ಷಮತೆ ಲೆಕ್ಕ ಪರಿಶೋಧನೆ ವರದಿ ಹೇಳಿದೆ.
 
2014 ಏಪ್ರಿಲ್‍ನಿಂದ 2021ರ ಮಾರ್ಚ್‍ವರೆಗಿನ ಅವಧಿಯಲ್ಲಿ ರಸ್ತೆ ಸುರಕ್ಷತೆ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಿದ್ದು, ಆಯ್ಕೆಯಾದ ಮಾದರಿ ರಸ್ತೆ ವಿವರಣೆಗಳ ಜಂಟಿ ಪರಿಶೀಲನೆಯಿಂದ ರಸ್ತೆ ಬಳಕೆ ಅತ್ಯಂತ ಅಪಾಯಕಾರಿ ಎಂದು ತಿಳಿದುಬಂದಿದೆ.
 
ಪ್ರತಿ ಕಿ.ಮೀಗೆ ರಾಜ್ಯ ಹೆದ್ದಾರಿಗಲು 8.87 ಜಿಲ್ಲಾ ಮುಖ್ಯರಸ್ತೆಗಳು 8.43 ಹಾಗೂ ರಾಷ್ಟ್ರೀಯ ಹೆದ್ದಾರಿಗಳು 7.39 ಅಪಾಯಗಳನ್ನು ಹೊಂದಿವೆ ಎಂದು ಉಲ್ಲೇಖಿಸಲಾಗಿದೆ. 2015ಕ್ಕೆ ಹೋಲಿಸಿದರೆ 2020ರಲ್ಲಿ ಮಾರಣಾಂತಿಕ ಅಪಘಾತಗಳು ಹೆಚ್ಚಾಗಿ ರಸ್ತೆ ಸುರಕ್ಷತಾ ನೀತಿಯಲ್ಲಿ ನಿಗದಿಪಡಿಸಿದ್ದು ಗುರಿ ಸಾಧಿಸಿಲ್ಲ.
 
2019ರವರೆಗೆ ಅಪಘಾತಗಳ ಸಂಖ್ಯೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ ಎಂದಿದೆ. ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರವೂ ಕಳೆದ ಅಕ್ಟೋಬರ್‍ವರೆಗೂ ನಿಯಮಗಳನ್ನು ರಚನೆ ಮಾಡಲು ಸಾಧ್ಯವಾಗಿಲ್ಲ.
 
ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಗಳ ಕಾರ್ಯ ನಿರ್ವಹಣೆಗೆ ಕ್ರಿಯಾ ಯೋಜನೆಯನ್ನು ರಚಿಸಲು ಮಾರ್ಗಸೂಚಿ ಹೊರಡಿಸಿಲ್ಲ ಎಂದು ಆಕ್ಷೇಪಿಸಿದೆ. ಗುರುತಿಸಲಾದ ಕಪ್ಪುಚುಕ್ಕೆ ಸ್ಥಳಗಳನ್ನು ಶೀಘ್ರವಾಗಿ ಸರಿಪಡಿಸುವಲ್ಲಿ ಸಂಬಂಧಿಸಿದ ರಸ್ತೆ ನಿರ್ವಹಣಾ ಸಂಸ್ಥೆಗಳು ವಿಫಲವಾಗಿವೆ. ಮೋಟಾರು ವಾಹನಗಳ ನಿರೀಕ್ಷಕರ ಶ್ರೇಣಿಯಲ್ಲಿ ಅತಿ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಪೊಲೀಸ್ ಇಲಾಖೆ ಪರಿಚಯಿಸಿದ್ದ ಹೆದ್ದಾರಿ ಗಸ್ತು ನಿರೀಕ್ಷಿತ ರೀತಿಯಲ್ಲಿ ಕಾರ್ಯ ನಿರ್ವಹಿಸಿಲ್ಲ. ಬೇರೆ ಉದ್ದೇಗಳಿಗೆ ಬಳಕೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ