ಕಬ್ಜ ಸಿನಿಮಾಗೆ ಹೀರೋಯಿನ್ ಫಿಕ್ಸ್: ಮತ್ತೆ ಕನ್ನಡಕ್ಕೆ ಬಂದ ದಕ್ಷಿಣ ಭಾರತದ ಸುಂದರಿ
ಟಾಲಿವುಡ್ ಬೆಡಗಿ ಶ್ರಿಯಾ ಸರಣ್ ಕಬ್ಜ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ ಅಧಿಕೃತವಾಗಿ ನಾಯಕಿ ಯಾರೆಂಬ ಗುಟ್ಟು ಬಿಟ್ಟುಕೊಟ್ಟಿದೆ.
ಶ್ರಿಯಾ ಈ ಹಿಂದೆ ಪುನೀತ್ ರಾಜ್ ಕುಮಾರ್ ಅವರ ಅರಸು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಕನ್ನಡದಲ್ಲಿ ಅಭಿನಯಿಸುತ್ತಿದ್ದಾರೆ. ಕಬ್ಜ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಏಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.