ಅದ್ಧೂರಿಯಾಗಿ ಹೊಸ ಮನೆಗೆ ಕಾಲಿಟ್ಟ ಶ್ರುತಿ, ಸ್ನೇಹಿತೆಯರಿಂದ ಶುಭಹಾರೈಕೆ

Sampriya

ಶನಿವಾರ, 7 ಡಿಸೆಂಬರ್ 2024 (18:28 IST)
Photo Courtesy X
ಕನ್ನಡದ ಜನಪ್ರಿಯ ನಟಿ ಶ್ರುತಿ ಅವರು ತಮ್ಮ ನೂತನ ಮನೆಯ ಗೃಹಪ್ರವೇಶವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಸ್ಯಾಂಡಲ್‌ವುಡ್‌ನ ಖ್ಯಾತ ನಟ ನಟಿಯರು ಆಗಮಿಸಿ, ಶುಭಕೋರಿದ್ದಾರೆ.

ಮೇಘನಾ ರಾಜ್, ಪ್ರಮೀಳಾ ಜೋಷಾಯಿ, ತರುಣ್ ಸುಧೀರ್‌, ಸೋನಲ್ ಮಂಥೆರೊ, ಪ್ರಿಯಾಂಕಾ ಉಪೇಂದ್ರ, ಶಿಲ್ಪಾ ಗಣೇಶ್, ಅಮೂಲ್ಯ, ಲವ್ಲಿ ಸ್ಟಾರ್ ಪ್ರೇಮ್‌ ಮುಂತಾದ ಕಲಾವಿದರು ಶುಭ ಹಾರೈಸಿದ್ದಾರೆ.

ಶ್ರುತಿ ಸ್ನೇಹಿತರಾದ ಸುಧಾರಾಣಿ, ಮಾಳವಿಕಾ ಹಾಗೂ ತಾರಾ ಅನುರಾಧ ಕೂಡಾ ಆಗಮಿಸಿ, ಹೊಸ ಮನೆಯಲ್ಲಿ ಸ್ನೇಹಿತೆಯ ಬಾಳಿಗೆ ಇನ್ನಷ್ಟು ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.  ಇನ್ನೂ  ಸಂಗೀತ ನಿರ್ದೇಶಕ ಹರಿಕೃಷ್ಣ, ವಾಣಿ ಹರಿಕೃಷ್ಣ, ಗಾಯಕಿ ಅರ್ಚನಾ ಉಡುಪ, ಮಧು ದೈತೋಟ, ವಾಸುಕಿ ವೈಭವ್ ಕೂಡ ಆಗಮಿಸಿದ್ದರು.

ಅದಲ್ಲದೆ ನಿರೂಪಕ ನಿರಂಜನ್ ದೇಶ ಪಾಂಡೆ ಹಾಗೂ ಪತ್ನಿ ಯಶಸ್ವಿನಿ ದೇಶಪಾಂಡೆ ಕೂಡ ಭಾಗಿಯಾಗಿದ್ದಾರೆ. ಇನ್ನು ಪುತ್ರು ಆರಾಧನಾ ರಾಮ್ ಜತೆ ಮಾಲಾಶ್ರೀ ಕೂಡಾ ಗೃಹಪ್ರವೇಶದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ