ಏಕಾಏಕಿ ಮನೆಬಿಟ್ಟು ಹೋಗಲು ರೆಡಿ ಎಂದ ತ್ರಿವಿಕ್ರಮ್, ಕಾರಣ ಹೀಗಿದೆ

Sampriya

ಶನಿವಾರ, 7 ಡಿಸೆಂಬರ್ 2024 (17:43 IST)
Photo Courtesy X
ಈ ವಾರದ ಕಿಚ್ಚನ ಪಂಚಾಯಿತಿಯಲ್ಲಿ ನಾನು ಆ ರೀತಿ ನಡೆದುಕೊಂಡಿದ್ದರೆ ಮನೆಯಿಂದ ಹೊರಹೋಗಲು ಸಿದ್ದ ಎಂದು ತ್ರಿವಿಕ್ರಮ್ ಕಿಚ್ಚ ಸುದೀಪ್ ಬಳಿ ಹೇಳಿಕೊಂಡಿದ್ದಾರೆ.

ಹಿಂದಿನ ವಾರ ಶೋಭಾ ಶೆಟ್ಟಿ ಶೋ ಕ್ವಿಟ್ ಮಾಡಿದ್ದರು. ಈ ವಿಚಾರವಾಗಿ ಕಿಚನ್‌ನಲ್ಲಿ ತ್ರಿವಿಕ್ರಮ್ ಹಾಗೂ ಗೌತಮಿ ಅವರು ಕೋಡ್ ವರ್ಡ್‌ನಲ್ಲಿ ಮಾತನಾಡಿದ್ದರು. ಎರಡು ಅಕ್ಕಿ ಕಾಳನ್ನು ಇಟ್ಟು ಬಾಟಂ 2 ಅಂತ ಗೌತಮಿಗೆ ತ್ರಿವಿಕ್ರಮ್‌ಗೆ ಹಿಂಟ್ ಕೊಡುತ್ತಾರೆ. ಇನ್ನೂ ಅವರ ಮಾತುಗಳಲ್ಲಿ ಶಿಶಿರ್ ಅವರನ್ನು ಸೇಫ್ ಮಾಡಲು ಹೋಗಿ ಶೋಭಾ ಶೆಟ್ಟಿ ಕ್ವಿಟ್ ಮಾಡಿರಬಹುದು ಎಂಬ ಅರ್ಥದಲ್ಲಿ ಮಾತನಾಡಿದ್ದರು. ಈ ವಿಚಾರದ ಬಗ್ಗೆ ಇಂದು ತ್ರಿವಿಕ್ರಂಗೆ ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದೀಗ ಕಲರ್ಸ್‌ ವಾಹಿನಿ ಹೊಸ ಪ್ರೋಮೋದಲ್ಲಿ ಕಿಚ್ಚ ಅವರು ತ್ರಿವಿಕ್ರಮ್‌ ಅವರಿಗೆ ಶೋಭಾ ಅವರು ಯಾಕೆ ಹೋದ್ರು ಎನ್ನೋದು ನಿಮಗೆ ಗೊತ್ತೇ ಇದೆ ಅಲ್ಲವೆ? ಎಂದು ಕೇಳಿದ್ದಾರೆ. ಅದಕ್ಕೆ ತ್ರಿವಿಕ್ರಮ್‌ ಈ ಬಗ್ಗೆ ನನಗೆ ಕನ್‌ಫ್ಯೂಷನ್‌ ಇದೆ ಎಂದಿದ್ದಾರೆ. ಅದಕ್ಕೆ ಸುದೀಪ್‌ ಅವರು ಏನು ಕನ್‌ಫ್ಯೂಷನ್‌? ನಿಮ್ಮ ಎದುರುಗಡೆನೇ ಎಲ್ಲ ನಡೀತಲ್ವಾ? ಇನ್ನು ತ್ರಿವಿಕ್ರಮ್‌ ಅವರು ಕೋಪ ಮಾಡಿಕೊಳ್ಳಲ್ಲ ಅಂದರೆ ಹೇಳುತ್ತೀನಿ. ನಿಮಗೆ ತಲೆ ತಗ್ಗಿಸಲು ರೆಡಿ ಎಂದಿದ್ದಾರೆ.

ಅದಕ್ಕೆ ಕಿಚ್ಚ ಅವರು. ನಿಮ್ಮನ್ನ ಕೇಳಿ ನಾನು ಕೋಪ ಮಾಡಿಕೊಳ್ಳಲು ಬೇಕಾಗಿಲ್ಲ. ನಾನು ಯಾರಗೂ ನನ್ನ ಮುಂದೆ ತಲೆ ತಗ್ಗಿಸಬೇಕು ಅಂತ ಹೇಳೋ ಮಗನೇ ಅಲ್ಲ ಎಂದಿದ್ದಾರೆ. ಬಿಗ್ಬಾಸ್ ನಿರ್ಣಯದ ಬಗ್ಗೆ ತ್ರಿವಿಕ್ರಮ್ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ, ಅಶಿಸ್ತು ಪ್ರದರ್ಶನ ಮಾಡಿದ್ದಾರೆಂಬ ಕಾರಣಕ್ಕೆ ಇದೀಗ ಸುದೀಪ್, ತ್ರಿವಿಕ್ರಮ್ ಅನ್ನು ಪ್ರಶ್ನೆ ಮಾಡಿದ್ದು, ತ್ರಿವಿಕ್ರಮ್ ಸಹ ಮನೆ ಬಿಟ್ಟು ಹೋಗುವೆ ಎಂದಿದ್ದಾರೆ. ಅಷ್ಟೇ ಅಲ್ಲ ಗೌರವ ನಿಡದೇ ಇರುವ ಕೆಲಸ ಆಗಿದೆ ಎಂದು ನೇರವಾಗಿ ಸುದೀಪ್‌ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ