ಏಕ್ ಲವ್ ಯಾ ಸಿನಿಮಾ ವೀಕ್ಷಿಸಿದ ಸಿದ್ದರಾಮಯ್ಯ
ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ರಾಜಕೀಯ ಗಣ್ಯರಿಗೆ ನಿರ್ದೇಶಕ ಪ್ರೇಮ್ ಈಗಾಗಲೇ ವಿಶೇಷ ಆಹ್ವಾನವಿತ್ತಿದ್ದರು.
ಅದರಂತೆ ಸಿದ್ದರಾಮಯ್ಯ ತಮ್ಮ ಬಳಗದೊಂದಿಗೆ ಸಿನಿಮಾ ವೀಕ್ಷಣೆಗೆ ಬಂದಿದ್ದಾರೆ. ಈ ವೇಳೆ ನಿರ್ಮಾಪಕಿ ರಕ್ಷಿತಾ ಸೇರಿದಂತೆ ಇಡೀ ಚಿತ್ರತಂಡ ಸಿದ್ದರಾಮಯ್ಯರನ್ನು ಸ್ವಾಗತಿಸಿತು. ಚಿತ್ರ ವೀಕ್ಷಿಸಿದ ಬಳಿಕ ಪ್ರೇಮ್ ಮತ್ತು ತಂಡಕ್ಕೆ ಸಿದ್ಧು ಚಿತ್ರ ಚೆನ್ನಾಗಿದೆ ಎಂದು ಶುಭ ಹಾರೈಸಿದರು.