ಸೈಮಾ ಪ್ರಶಸ್ತಿ ಪ್ರಕಟ: ಕಾಂತಾರ ಸಿನಿಮಾಗೆ ಪ್ರಶಸ್ತಿಗಳ ಸುರಿಮಳೆ

ಶನಿವಾರ, 16 ಸೆಪ್ಟಂಬರ್ 2023 (09:00 IST)
Photo Courtesy: Twitter
ದುಬೈ: ಪ್ರತಿಷ್ಠಿತ ಸೈಮಾ ಪ್ರಶಸ್ತಿ ಸಮಾರಂಭ ದುಬೈನಲ್ಲಿ ನಿನ್ನೆ ನಡೆದಿದ್ದು, ಕನ್ನಡದಲ್ಲಿ ಕಾಂತಾರ ಬಹುತೇಕ ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.

ದಕ್ಷಿಣ ಭಾರತ ಸಿನಿಮಾ ರಂಗದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಸೈಮಾದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಕನ್ನಡದಲ್ಲಿ ಕಾಂತಾರ, 777 ಚಾರ್ಲಿ, ಕೆಜಿಎಫ್ 2, ವಿಕ್ರಾಂತ್ ರೋಣ ಸಿನಿಮಾಗಳ ನಡುವೆ ತೀವ್ರ ಪೈಪೋಟಿಯಿತ್ತು.

ಈ ಪೈಕಿ ಕಾಂತಾರ, ಚಾರ್ಲಿ 777 ಮೇಲುಗೈ ಸಾಧಿಸಿದೆ. ಅದರಲ್ಲೂ ಅತ್ಯುತ್ತಮ ನಟ, ನಿರ್ದೇಶಕ ಪ್ರಶಸ್ತಿ ಕಾಂತಾರ ಸಿನಿಮಾಗಾಗಿ ರಿಷಬ್ ಶೆಟ್ಟಿ ಪಾಲಾಗಿದೆ. ಕಾಂತಾರ ಸಿನಿಮಾದ ಸಿಂಗಾರ ಸಿರಿಯೆ ಹಾಡಿಗಾಗಿ ವಿಜಯ್ ಪ್ರಕಾಶ್ ಅತ್ಯುತ್ತಮ ಗಾಯಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಲೀಲಾ ಪಾತ್ರ ಮಾಡಿದ್ದ ಸಪ್ತಮಿ ಗೌಡ ಅತ್ಯುತ್ತಮ ನಟಿ, ಅತ್ಯುತ್ತಮ ಸಾಹಿತ್ಯ ಸಿಂಗಾರ ಸಿರಿಯೆ ಹಾಡು ಬರೆದಿದ್ದ ಪ್ರಮೋದ್ ಮರವಂತೆ, ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಅತ್ಯುತ್ತಮ ಸಂಗೀತ ನಿರ್ದೇಶಕ, ಇದೇ ಸಿನಿಮಾದ ಕಾಮಿಡಿ ರೋಲ್ ಗಾಗಿ ಪ್ರಕಾಶ್ ತುಮಿನಾಡ್, ವಿಲನ್ ಪಾತ್ರಕ್ಕಾಗಿ ಅಚ್ಯುತ್ ಕುಮಾರ್ ಪ್ರಶಸ್ತಿ ಪಡೆದಿದ್ದಾರೆ.

ಇನ್ನು ಅತ್ಯುತ್ತಮ ಸಿನಿಮಾವಾಗಿ ರಕ್ಷಿತ್ ಶೆಟ್ಟಿ ನಿರ್ಮಿಸಿ, ನಟಿಸಿದ್ದ 777 ಚಾರ್ಲಿ ಸಿನಿಮಾ ಪ್ರಶಸ್ತಿ ಪಡೆದಿದೆ. ಗಾಳಿ ಪಟ 2 ಚಿತ್ರದಲ್ಲಿ ನಟನೆಗಾಗಿ ದಿಗಂತ್ ಅತ್ಯುತ್ತಮ ಪೋಷಕ ನಟ, ಹೋಂ ಮಿನಿಸ್ಟರ್ ಸಿನಿಮಾಗೆ ಅತ್ಯುತ್ತಮ ಪೋಷಕ ನಟಿ ಶುಭ ರಕ್ಷ, ವಿಕ್ರಾಂತ್ ರೋಣ ಸಿನಿಮಾದ ನೀತಾ ಅಶೋಕ್ ಉದಯೋನ್ಮುಖ ನಟಿ, ಕೆಜಿಎಫ್ 2 ಸಿನಿಮಾ ನಟನೆಗಾಗಿ ಶ್ರೀನಿಧಿ ಶೆಟ್ಟಿ ವಿಮರ್ಶಕರ ಅತ್ಯುತ್ತಮ ನಟಿ, ಪದವಿ ಪೂರ್ವ ಸಿನಿಮಾ ನಟನೆಗಾಗಿ ಪೃಥ್ವಿ ಶಾಮನೂರು ಉದಯೋನ್ಮುಖ ನಟ, ಕೆಜಿಎಫ್ 2 ಕ್ಯಾಮರಾ ಕೈ ಚಳಕಕ್ಕೆ ಭುವನ್ ಗೌಡ, ಚೊಚ್ಚಲ ಸಿನಿಮಾ ನಿರ್ದೇಶನಕ್ಕಾಗಿ ಡೊಳ್ಳು ಸಿನಿಮಾದ ನಿರ್ದೇಶಕ ಸಾಗರ್ ಪುರಾಣಿಕ್, ಇದೇ ಸಿನಿಮಾ ನಿರ್ಮಾಣಕ್ಕಾಗಿ ಪವನ್ ಒಡೆಯರ್ ದಂಪತಿ ಪ್ರಶಸ್ತಿ ಪಡೆದಿದ್ದಾರೆ.

ತೆಲುಗಿನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಆರ್ ಆರ್ ಆರ್ ಸಿನಿಮಾಗಾಗಿ ಜ್ಯೂ.ಎನ್ ಟಿಆರ್ ಪಡೆದುಕೊಂಡರೆ ರಾಜಮೌಳಿ ಅತ್ಯುತ್ತಮ ನಿರ್ದೇಶಕರಾಗಿದ್ದಾರೆ. ಇದೇ ಸಿನಿಮಾದ ಸಂಗೀತ ನಿರ್ದೇಶನಕ್ಕೆ ಎಂಎಂ. ಕೀರವಾಣಿ, ಸಾಹಿತ್ಯಕ್ಕೆ ಚಂದ್ರಭೋಸ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅತ್ಯುತ್ತಮ ಸೀತಾ ರಾಮಂ ಸಿನಿಮಾಗೆ ಮೃಣಾಲ್ ಠಾಕೂರ್ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ