ಚೆನ್ನೈ : ತಮಿಳು ನಟ ಸಿಂಬು ಅವರು ತಮ್ಮ ದೇಹದ ತೂಕವನ್ನು 30ಕೆಜಿಗೆ ಇಳಿಸಿಕೊಳ್ಳುವುದರ ಮೂಲಕ ಸುದ್ದಿಯಾಗಿದ್ದಾರೆ.
ಇದಕ್ಕಾಗಿ ಅವರು ಈಜು ತರಬೇತಿ, ಟೆನಿಸ್, ಬಾಸ್ಕೆಟ್ ಬಾಲ್ ಮುಂತಾದ ಕ್ರೀಡೆಗಳನ್ನು ಸಕ್ರಿಯವಾಗಿ ಆಡುತ್ತಿದ್ದಾರೆ. ಈ ನಡುವೆ ಇದೀಗ ಅವರು ಭರತನಾಟ್ಯವನ್ನು ಕಲಿಯುತ್ತಿದ್ದಾರೆ ಎನ್ನಲಾಗಿದೆ.
ಸಿಂಬು ಜೊತೆ ಒಸ್ಟಿ ಚಿತ್ರದಲ್ಲಿ ನಟಿಸಿದ್ದ ನಟಿ ಶರಣ್ಯ ಮೋಹನ್ ಅವರು ಸಿಂಬು ಅವರ ಗುರುವಾಗಿ ನೃತ್ಯ ಕಲಿಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಎನ್ನಲಾಗಿದೆ.