ಮಾಸ್ ಮಾತ್ರವಲ್ಲದೆ ಮನರಂಜನೆಯಲ್ಲಿಯೂ ಪಾಸ್ ಆಗಲಿದ್ದಾನೆ `ಸಿಂಗ’!

ಮಂಗಳವಾರ, 9 ಜುಲೈ 2019 (14:04 IST)
ಸಿನಿಮಾ ಮಾಸ್, ಕ್ಲಾಸ್ ಏನೇ ಇರಲಿ. ಒಂದಿಡೀ ಚಿತ್ರ ಮನರಂಜನೆಯತ್ತ ಫೋಕಸ್ ಮಾಡದಿದ್ದರೆ ಪುಷ್ಕಳ ಗೆಲುವು ದಕ್ಕಿಸಿಕೊಳ್ಳೋದು ಕಷ್ಟ. ಇಂಥಾ ಸೂಕ್ಷ್ಮವನ್ನು ಮನಗಂಡೇ ನಿರ್ದೇಶಕ ವಿಜಯ್ ಕಿರಣ್ ಸಿಂಗ ಚಿತ್ರವನ್ನು ಸಂಪೂರ್ಣ ಮನೋರಂಜನಾ ಅಂಶಗಳೊಂದಿಗೆ ಕಟ್ಟಿ ಕೊಟ್ಟಿದ್ದಾರೆ. ಐದಾರು ಮಂದಿ ಯುವ ಹಾಸ್ಯ ಕಲಾವಿದರು ನಗಿಸುತ್ತಲೇ ಸಿಂಗನ ಮೂಲಕ ಹಿರಿತೆರೆಗೆ ಎಂಟ್ರಿ ಕೊಡಲು ತಯಾರಾಗಿದ್ದಾರೆ.
ಉದಯ್ ಮೆಹ್ತಾ ನಿರ್ಮಾಣ ಮಾಡಿರುವ ಸಿಂಗ ಇದೇ ತಿಂಗಳ ಹತ್ತೊಂಬತ್ತರಂದು ಬಿಡುಗಡೆಗೆ ರೆಡಿಯಾಗಿದೆ. ಈ ಚಿತ್ರದ ಟ್ರೈಲರ್ನಲ್ಲಿ ಶಿವರಾಜ್ ಕೆ ಆರ್ ಪೇಟೆ ಕಾಣಿಸಿಕೊಂಡಿದ್ದರಿಂದ ಅವರೊಬ್ಬರೇ ಕಾಮಿಡಿ ಸೀನುಗಳನ್ನು ನಿಭಾಯಿಸಿದ್ದಾರೆ ಅಂತ ಅನೇಕರು ಅಂದುಕೊಂಡಿರ ಬಹುದು. ಆದರೆ ಈ ಚಿತ್ರದಲ್ಲಿ ಕಾಮಿಡಿ ಕಿಲಾಡಿಗಳು ಸೇರಿದಂತೆ ಕಿರುತೆರೆಯ ನಗೆ ಶೋಗಳಲ್ಲಿ ಸ್ಪರ್ಧಿಗಳಾಗಿದ್ದ ಆರೇಳು ಮಂದಿಯೂ ನಗಿಸಲು ಸರದಿಯಲ್ಲಿ ನಿಂತಿದ್ದಾರೆ.
ಶಿವರಾಜ್ ಕೆ ಆರ್ ಪೇಟೆ ನಟಿಸಿದ್ದಾರೆಂದರೆ ಅದು ಕಾಮಿಡಿ ಪಾತ್ರವೇ ಅನ್ನೋದು ಪ್ರೇಕ್ಷಕರ ಅಭಿಪ್ರಾಯ. ಆದರೆ ಸಿಂಗದಲ್ಲಿ ಅವರು ನಿರ್ವಹಿಸಿರೋ ಪಾತ್ರ ಅದನ್ನು ಸುಳ್ಳು ಮಾಡುವಂತಿದೆ. ಯಾಕೆಂದರೆ ಶಿವರಾಜ್ ಇಲ್ಲಿ ಗಂಭೀರವಾದ ಗುಣ ಲಕ್ಷಣಗಳಿರೋ ಪಾತ್ರವನ್ನೂ ನಿರ್ವಹಿಸಿದ್ದಾರೆ. ಆದರೂ ಕಾಮಿಡಿಗೇನೂ ತತ್ವಾರವಾಗದಂತೆ ಇತರೇ ಕಾಮಿಡಿ ಕಿಲಾಡಿಗಳು ನೋಡಿಕೊಂಡಿದ್ದಾರೆ. ಹಾಗಂತ ನಿರ್ದೇಶಕರು ಈ ಕಾಮಿಡಿ ಕಿಲಾಡಿಗಳನ್ನು ಬರೀ ನಗಿಸೋ ಉದ್ದೇಶದಿಂದ ತರಾತುರಿಯಲ್ಲಿ ಪಾತ್ರ ಸೃಷ್ಟಿಸಿ ಕರೆ ತಂದಿಲ್ಲ. ಅವರೆಲ್ಲರ ಪಾತ್ರಗಳೂ ಕಥೆಯೊಂದಿಗೇ ಮಿಳಿತವಾಗಿದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ