ಶಿವಕಾರ್ತಿಕೇಯನ್ ಡಾಕ್ಟರ್ ಚಿತ್ರದ ಈ ಹಾಡಿಗೆ ಸಿಕ್ಕ ಲೈಕ್ಸ್ ಎಷ್ಟು ಗೊತ್ತಾ?
ಶನಿವಾರ, 12 ಡಿಸೆಂಬರ್ 2020 (12:14 IST)
ಚೆನ್ನೈ : ಮಾಸ್ಟರ್ ಚಿತ್ರದ ನಂತರ ವಿಜಯ್ ಅವರ 65ನೇ ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆ ಮತ್ತು ನಿರ್ಮಿಸುತ್ತಾರೆ ಎಂಬ ಬಗ್ಗೆ ಹೆಚ್ಚಿನ ನಿರೀಕ್ಷೆ ಇದ್ದರೂ ಸನ್ ಪಿಕ್ಚರ್ಸ್ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರೊಂದಿಗೆ ಸೇರಿಕೊಳ್ಳಲು ನಿರ್ಧರಿಸಿತ್ತು.
ಇದು ವಿಜಯ್ ಅಭಿಮಾನಿಗಳಿಗೆ ತುಂಬಾ ಸಂತೋಷ ತಂದಿದೆ. ಈ ನಡುವೆ ನಟ ಶಿವಕಾರ್ತೀಕೇಯನ್ ಅವರು ನಟಿಸುತ್ತಿರುವ ಡಾಕ್ಟರ್ ಚಿತ್ರವನ್ನು ನೆಲ್ಸನ್ ದಿಲೀಪ್ ಅವರು ನಿರ್ದೇಶಿಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ನಟ ಶಿವಕಾರ್ತೀಕೇಯನ್ ಅಭಿನಂದನೆ ಸಲ್ಲಿಸಿದ್ದಾರೆ.
ಹಾಗೂ ಈ ಚಿತ್ರದಲ್ಲಿ ಅನಿರುದ್ಧ ಹಾಡಿದ ಸೆಲ್ಲಮ್ಮ ಸೆಲ್ಲಮ್ಮ ಹಾಡು 1 ಮಿಲಿಯನ್ ಲೈಕ್ಸ್ ಪಡೆದು ದಾಖಲೆ ದಾಟಿದೆ. ಇದನ್ನು ಶಿವಕಾರ್ತಿಕೇಯನ್ ಪೋಸ್ಟ್ ಮಾಡಿದ್ದನ್ನು, ನೆಲ್ಸನ್ ಅವರು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.