3 ತಿಂಗಳ ಮಗುವನ್ನು ಅಪಹರಿಸಿ ಮಾರಾಟ ಮಾಡಿದ ಗ್ಯಾಂಗ್ ಅರೆಸ್ಟ್

ಶನಿವಾರ, 12 ಡಿಸೆಂಬರ್ 2020 (06:41 IST)
ಚೆನ್ನೈ : ಆರು ಜನರು ಗುಂಪೊಂದು ಮಾರುಕಟ್ಟೆಯಿಂದ 3 ತಿಂಗಳ ಮಗುವನ್ನು ಅಪಹರಿಸಿ ಮಾರಾಟ ಮಾಡಲು ಯತ್ನಿಸಿದ ಘಟನೆ ಕೊಯೆಂಬೆಡು ಮಾರುಕಟ್ಟೆಯಲ್ಲಿ ನಡೆದಿದೆ.

ಕೊಯೆಂಬೆಡು ಮಾರುಕಟ್ಟೆಯ ಬಳಿ ಮಗು ಮಲಗಿದ್ದಾಗ 6 ಮಂದಿ ಅಪಹರಿಸಿದ್ದಾರೆ. 25 ಲಕ್ಷಕ್ಕೆ ಮಗುವನ್ನು ಮಹಿಳೆಯೊಬ್ಬಳಿಗೆ ಮಾರಾಟ ಮಾಡಿದ್ದಾರೆ. ಆದರೆ ಮಗು ಕಾಣೆಯಾದ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ  ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ