ತೆಲುಗಿನಲ್ಲಿ ಇಷ್ಟು ಸಂಭಾವನೆ ಪಡೆಯುತ್ತಿದ್ದಾರೆ ನಟಿ ಶ್ರೀಲೀಲಾ!

ಶನಿವಾರ, 1 ಜುಲೈ 2023 (08:20 IST)
ಹೈದರಾಬಾದ್: ಕನ್ನಡ ಮೂಲದ ನಟಿ ಶ್ರೀಲೀಲಾ ಈಗ ತೆಲುಗಿನಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

ಸೂಪರ್ ಸ್ಟಾರ್ ಮಹೇಶ್ ಬಾಬು, ಅಲ್ಲು ಅರ್ಜುನ್ ಮುಂತಾದ ನಟರಿಗೆ ನಾಯಕಿಯಾಗುವ ಅದೃಷ್ಟ ಶ್ರೀಲೀಲಾಗೆ ಒಲಿದಿದೆ. ಈ ನಡುವೆ ತೆಲುಗಿನಲ್ಲಿ ಇಷ್ಟೊಂದು ಬೇಡಿಕೆಯಿರುವ ಶ್ರೀಲೀಲಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಮೂಲಗಳ ಪ್ರಕಾರ ಶ್ರೀಲೀಲಾ ತೆಲುಗಿನಲ್ಲಿ 2 ಕೋಟಿ ರೂ. ಸಂಭಾವನೆಗೆ ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಕನ್ನಡದವರೇ ಆದ ಇನ್ನೊಬ್ಬ ನಟಿ ರಶ್ಮಿಕಾ ಮಂದಣ್ಣ 4-5 ಕೋಟಿವರೆಗೂ ಚಾರ್ಜ್ ಮಾಡುತ್ತಿದ್ದಾರೆ. ಶ್ರೀಲೀಲಾ ಕೂಡಾ ಈಗಿರುವ ಸಿನಿಮಾಗಳು ಬಿಡುಗಡೆಯಾಗಿ ಹಿಟ್ ಲಿಸ್ಟ್ ಗೆ ಸೇರ್ಪಡೆಯಾದರೆ ಅಷ್ಟೇ ಸಂಭಾವನೆ ಏರಿಕೆ ಮಾಡುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ