ಹೈದರಾಬಾದ್: ಕನ್ನಡದವರೇ ಆದ ಶ್ರೀಲೀಲಾ ಮತ್ತು ರಶ್ಮಿಕಾ ಮಂದಣ್ಣ ಈಗ ಟಾಲಿವುಡ್ ನಲ್ಲಿ ಕಾಂಪಿಟೀಷನ್ ನಡೆಸುತ್ತಿದ್ದಾರೆ.
ಇತ್ತೀಚೆಗೆ ರಶ್ಮಿಕಾರ ಅವಕಾಶಗಳನ್ನೂ ಶ್ರೀಲೀಲಾ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಈಗ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಶ್ರೀಲೀಲಾ ರಶ್ಮಿಕಾಗೂ ಮೊದಲೇ ಟಾಲಿವುಡ್ ಗೆ ಬರಬೇಕಿತ್ತು.
ರಶ್ಮಿಕಾ ತೆಲುಗಿನಲ್ಲಿ ಅಭಿನಯಿಸಿದ ಮೊದಲ ಸಿನಿಮಾ ಚಲೋ. ನಾಗಶೌರ್ಯ ನಾಯಕರಾಗಿರುವ ಈ ಸಿನಿಮಾ ಆಫರ್ ಮೊದಲು ಶ್ರೀಲೀಲಾಗೆ ಬಂದಿತ್ತಂತೆ. ಆದರೆ ಶ್ರೀಲೀಲಾ ನೋ ಅಂದಿದ್ದರಿಂದ ಆ ಸ್ಥಾನಕ್ಕೆ ರಶ್ಮಿಕಾರನ್ನು ಕರೆತರಲಾಯಿತು ಎಂದು ನಾಗಶೌರ್ಯ ಅವರೇ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.