ಒಂದು ಸಿನಿಮಾಗೆ 200 ಕೋಟಿ ಸಂಭಾವನೆ ಪಡೆದ ಆ ಸೌತ್ ಇಂಡಿಯನ್ ಸ್ಟಾರ್ ಯಾರು?!

ಮಂಗಳವಾರ, 27 ಜೂನ್ 2023 (08:20 IST)
Photo Courtesy: Twitter

ಚೆನ್ನೈ: ಈಗೆಲ್ಲಾ ಸ್ಟಾರ್ ನಟರು ತಮ್ಮ ಸಿನಿಮಾಗೆ 100 ಕೋಟಿಗಳ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ ಈ ಸ್ಟಾರ್ ನಟ ತಮ್ಮ ಸಿನಿಮಾಗೆ 200 ಕೋಟಿ ಸಂಭಾವನೆ ಪಡೆಯುವ ಮೂಲಕ ಗರಿಷ್ಠ ಸಂಭಾವನೆ ಪಡೆದ ದಾಖಲೆ ಮಾಡಿದ್ದಾರೆ.

ಅವರು ಬೇರೆ ಯಾರೂ ಅಲ್ಲ. ತಮಿಳು ಸ್ಟಾರ್ ನಟ ದಳಪತಿ ವಿಜಯ್. ಇಷ್ಟು ದುಬಾರಿ ಸಂಭಾವನೆ ಪಡೆಯುವ ಮೂಲಕ ವಿಜಯ್ ಬಾಲಿವುಡ್ ನಟರನ್ನೂ ಮೀರಿಸಿ ನಂ.1 ಆಗಿದ್ದಾರೆ.

ಮುಂಬರುವ ಲಿಯೋ ಸಿನಿಮಾಗಾಗಿ ದಳಪತಿ ವಿಜಯ್ ಬರೋಬ್ಬರಿ 200 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಮಾಹಿತಿಯಿದೆ. ಈಗಾಗಲೇ ಅಲ್ಲು ಅರ್ಜುನ್, ಜ್ಯೂ.ಎನ್ ಟಿಆರ್ ಮುಂತಾದ ನಟರ ಸಂಭಾವನೆ 100 ಕೋಟಿ ತಲುಪಿದೆ. ಆದರೆ ವಿಜಯ್ ಎಲ್ಲರನ್ನೂ ಹಿಂದಿಕ್ಕಿದ್ದಾರೆ.

ಟೀಂ ಇಂಡಿಯಾದಲ್ಲಿ ಚೆಸ್ ನಲ್ಲಿ ನನ್ನ ಸೋಲಿಸುವವರೇ ಇಲ್ಲ: ಯಜುವೇಂದ್ರ ಚಾಹಲ್

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ