ಡ್ರಗ್ಸ್ ಕೇಸ್ ಆಗಿದ್ದಕ್ಕೆ ಲಿಯೋ ತಂಡಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ದಳಪತಿ ವಿಜಯ್

ಶುಕ್ರವಾರ, 30 ಜೂನ್ 2023 (09:00 IST)
Photo Courtesy: Twitter

ಚೆನ್ನೈ: ದಳಪತಿ ವಿಜಯ್ ನಾಯಕರಾಗಿರುವ ಲಿಯೋ ಸಿನಿಮಾದ ನಾ ರೆಡಿದಾ ಹಾಡಿನಲ್ಲಿ ಡ್ರಗ್ಸ್ ಸೇವನೆಗೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಆರೋಪಿಸಿ ಇತ್ತೀಚೆಗೆ ಕೇಸ್ ದಾಖಲಾಗಿತ್ತು.

ವಿಜಯ್ ಮೇಲೆ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ವಿಜಯ್ ಚಿತ್ರತಂಡಕ್ಕೆ ಖಡಕ್ ಸೂಚನೆ ಕೊಟ್ಟಿದ್ದಾರೆ. ಹಾಡು ಮಾತ್ರವಲ್ಲ, ಚಿತ್ರದಲ್ಲಿ ಡ್ರಗ್ಸ್ ಗೆ ಬಗ್ಗೆ ಇರುವ ಅಂಶಗಳನ್ನೆಲ್ಲಾ ತೆಗೆದು ಹಾಕುವಂತೆ ವಿಜಯ್ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.

 ದಳಪತಿ ವಿಜಯ್ ಸೂಚನೆ ಬೆನ್ನಲ್ಲೇ ಚಿತ್ರತಂಡ ಅಂತಹ ದೃಶ್ಯಗಳನ್ನು ತೆಗೆದು ಹಾಕಲು ಕ್ರಮ ಕೈಗೊಳ್ಳುತ್ತಿದೆ. ವಿಜಯ್ ವಿರುದ್ಧ ಸೆಲ್ವಂ ಎನ್ನುವವರು ದೂರು ನೀಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ