ಮತ್ತೆ ಒಂದಾದ್ರಾ ರಶ್ಮಿಕಾ-ವಿಜಯ್ ದೇವರಕೊಂಡ? ಫ್ಯಾಮಿಲಿ ಸಮೇತ ಡಿನ್ನರ್ ಡೇಟ್

ಭಾನುವಾರ, 25 ಜೂನ್ 2023 (18:10 IST)

ಹೈದರಾಬಾದ್: ಟಾಲಿವುಡ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಂದು ಕಾಲದಲ್ಲಿ ಡೇಟಿಂಗ್ ನಡೆಸಿ ಬಳಿಕ ಪರಸ್ಪರ ದೂರವಾಗಿದ್ದಾರೆ ಎಂಬ ಮಾತಿತ್ತು. ಆದರೆ ಈಗ ಮತ್ತೆ ಈ ಜೋಡಿ ಸುದ್ದಿಯಲ್ಲಿದೆ.

ವಿಜಯ್ ಸಮಂತಾ ಜೊತೆ ಆಪ್ತವಾಗಿದ್ದು ರಶ್ಮಿಕಾ ಬೆಲ್ಲಮಕೊಂಡ ಶ್ರೀನಿ ಜೊತೆ ಆಪ್ತವಾಗಿದ್ದರಿಂದ ಈ ಜೋಡಿ ಬೇರೆಯಾಗಿದ್ದಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಎಲ್ಲರ ಅನುಮಾನವನ್ನು ದೂರ ಮಾಡುವಂತೆ ಇಬ್ಬರೂ ಮತ್ತೆ ಒಟ್ಟಿಗೇ ಕಾಣಿಸಿಕೊಂಡಿದ್ದಾರೆ.

 ರೆಸ್ಟೋರೆಂಟ್ ಒಂದರಲ್ಲಿ ತಮ್ಮ ಸ್ನೇಹಿತರು, ಕುಟುಂಬಸ್ಥರ ಜೊತೆಗೇ ರಶ್ಮಿಕಾ-ವಿಜಯ್ ಡಿನ್ನರ್ ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ಮೂಲಕ ಇಬ್ಬರೂ ಬ್ರೇಕ್ ಅಪ್ ಆಗಿಲ್ಲ ಎಂದು ಸಾರಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ