ಸು ಫ್ರಮ್ ಸೋ ಒಟಿಟಿಯಲ್ಲಿ ರಿಲೀಸ್: ಆದ್ರೆ ಒಂದು ಟ್ವಿಸ್ಟ್ ಉಂಟು ಆಯ್ತಾ

Krishnaveni K

ಮಂಗಳವಾರ, 9 ಸೆಪ್ಟಂಬರ್ 2025 (09:37 IST)
ಬೆಂಗಳೂರು: ಥಿಯೇಟರ್ ನಲ್ಲಿ 100 ಕೋಟಿ ಕ್ಲಬ್ ಸೇರಿದ್ದ ಸೂಪರ್ ಹಿಟ್ ಸಿನಿಮಾ ಸು ಫ್ರಮ್ ಸೋ ಈಗ ಒಟಿಟಿಯಲ್ಲಿ ರಿಲೀಸ್ ಆಗಿದೆ. ಆದರೆ ಇಲ್ಲಿ ಒಂದು ಟ್ವಿಸ್ಟ್ ಇದೆ.

ರಾಜ್ ಬಿ ಶೆಟ್ಟಿ ನಿರ್ಮಾಣದ ಜೆಪಿ ತುಮಿನಾಡ್ ನಿರ್ದೇಶಿಸಿ, ನಟಿಸಿದ್ದ ಸು ಫ್ರಮ್ ಸೋ ಎನ್ನುವ ಸಿನಿಮಾ ಕೇವಲ 5 ಕೋಟಿ ಬಜೆಟ್ ನದ್ದಾಗಿದ್ದರೂ ಗಳಿಕೆಯಲ್ಲಿ ಮಾತ್ರ ದಾಖಲೆಯನ್ನೇ ಮಾಡಿತ್ತು. ಸೋತಿದ್ದ ಕನ್ನಡ ಚಿತ್ರರಂಗಕ್ಕೆ ಚೇತರಿಕೆ ನೀಡಿದ ಸಿನಿಮಾ.

ಈ ಸಿನಿಮಾ ಬಿಡುಗಡೆಯಾಗಿ 45 ದಿನಗಳ ಬಳಿಕ ಈಗ ಜಿಯೋ ಹಾಟ್ ಸ್ಟಾರ್ ಆಪ್ ನಲ್ಲಿ ರಿಲೀಸ್ ಆಗಿದೆ. ಇಂದಿನಿಂದ ಜಿಯೋ ಹಾಟ್ ಸ್ಟಾರ್ ನಲ್ಲಿ ಸು ಫ್ರಮ್ ಸೋ ವೀಕ್ಷಣೆಗೆ ಲಭ್ಯವಿದೆ. ಆದರೆ ಸಿನಿಮಾದ ಅವಧಿ ಕೇವಲ 2.10 ನಿಮಿಷ ಎಂದ ತೋರಿಸುತ್ತಿದೆ.

ಥಿಯೇಟರ್ ನಲ್ಲಿ ಸಿನಿಮಾ ಒಟ್ಟು 2.17 ನಿಮಿಷವಿತ್ತು. ಹೀಗಾಗಿ 7 ನಿಮಿಷಗಳ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ. ಆದರೆ ಯಾಕಾಗಿ ಈ ರೀತಿ ಮಾಡಲಾಗಿದೆ ಎಂಬುದಕ್ಕೆ ಚಿತ್ರತಂಡದಿಂದ ಸ್ಪಷ್ಟನೆ ಸಿಕ್ಕಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ