ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕಿ ಬಿ.ಕೆ ಸುಮಿತ್ರ ಪುತ್ರ ನಟ ಸುನೀಲ್ ರಾವ್

ಮಂಗಳವಾರ, 26 ಜೂನ್ 2018 (11:16 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ಪ್ರಸಿದ್ಧ ಗಾಯಕಿ ಬಿ.ಕೆ ಸುಮಿತ್ರ ಅವರ  ಮಗ  ಸುನೀಲ್ ರಾವ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.


ಸೋಮವಾರ (ಜೂನ್ 25) ದಂದು ತನ್ನ ಪ್ರೇಯಸಿ ಶ್ರೇಯಾ ಐಯ್ಯರ್ ಅವರ ಜೊತೆ  ಹಿರಿಯರ ಸಮ್ಮೂಖದಲ್ಲಿ ಸುನೀಲ್ ಅವರ ವಿವಾಹ ಸಮಾರಂಭ ನಡೆದಿದೆ. ವೃತ್ತಿಯಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿರುವ ಶ್ರೇಯಾ ಐಯ್ಯರ್ ಅವರು ಸುನೀಲ್ ಅಭಿನಯದ ‘ವೆಬ್ ಸೀರಿಸ್’ ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದರು. ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಇವರಿಬ್ಬರಿಗೆ ಪರಿಚಯವಾಗಿ, ಪರಿಚಯ ಪ್ರೀತಿಗೆ ತಿರುಗಿ ಈಗ ಇಬ್ಬರು ಮನೆಯವರ ಒಪ್ಪಿಗೆಯಿಂದ ಸತಿಪತಿಗಳಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ