ನಾವು ಸೇವಿಸುವ ಆಹಾರ ಪದಾರ್ಥದಲ್ಲಿ ಈ ಅಂಶ ಹೆಚ್ಚಾದರೆ ಸಾವು ಖಚಿತ

ಸೋಮವಾರ, 25 ಜೂನ್ 2018 (12:06 IST)
ಬೆಂಗಳೂರು : ಜಾರ್ಜ್ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ಹಾಗೂ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ಪ್ರತಿ ವರ್ಷ 6 ಲಕ್ಷ ಮಂದಿ ಭಾರತೀಯರು ತಮಗರಿವಿಲ್ಲದಂತೆ ಸಾವನ್ನಪ್ಪುತ್ತಿದ್ದಾರೆಂಬ ಮಾಹಿತಿಯನ್ನು ಬಹಿರಂಗಪಡಿಸಿದೆ. ಇದಕ್ಕೆ ಕಾರಣ ಇಲ್ಲಿದೆ ನೋಡಿ.


ಭಾರತೀಯರು ತಮಗರಿವಿಲ್ಲದಂತೆ ಸಾವನ್ನಪ್ಪುತ್ತಿರುವುದು ಉಪ್ಪಿನಂಶ ಇರುವ ಪದಾರ್ಥಗಳನ್ನು ಹೆಚ್ಚು ಸೇವಿಸುತ್ತಿರುವ ಕಾರಣ. ತಾವು ಖರೀದಿಸಿದ ಉತ್ಪನ್ನಗಳು ಅಥವಾ ಸೇವಿಸುವ ಆಹಾರ ಪದಾರ್ಥದಲ್ಲಿ ಉಪ್ಪಿನ ಪ್ರಮಾಣ ಜಾಸ್ತಿಯಾದ ಪಕ್ಷದಲ್ಲಿ ರಕ್ತದೊತ್ತಡ ಏರುಪೇರಾಗಿ ಈ ಸಾವುಗಳು ಸಂಭವಿಸುತ್ತಿವೆ ಎನ್ನಲಾಗಿದೆ. ಶುಗರ್ ಸಮಸ್ಯೆಗೆ ಮಾತ್ರ ಮಹತ್ವ ಕೊಡುತ್ತಿರುವ ಭಾರತೀಯರು ಉಪ್ಪಿನ ಪರಿಣಾಮಗಳನ್ನು ನಿರ್ಲಕ್ಷಿಸುತ್ತಿರುವುದೇ ಈ ಸಾವಿಗೆ ಕಾರಣವೆಂಬುದು ಅಧ್ಯಯನದಲ್ಲಿ ಕಂಡು ಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ