ಪ್ರಭಾಸ್ ಅತ್ಯಾಚಾರಿ, ಜ್ಯೂ.ಎನ್ ಟಿಆರ್ ಪೋರ್ನ್ ಸ್ಟಾರ್ ಎಂದ ಸ್ಯಾಕ್ರಿಫೈಸ್ ಸ್ಟಾರ್ ಸುನಿಶ್ಚಿತ್

ಗುರುವಾರ, 18 ಮೇ 2023 (17:02 IST)
ಹೈದರಾಬಾದ್: ಕೆಲವರಿಗೆ ಸುಳ್ಳು, ವಿವಾದಗಳೇ ಸುದ್ದಿಯಲ್ಲಿರಲು ಬಂಡವಾಳವಾಗಿರುತ್ತದೆ. ಆ ಸಾಲಿಗೆ ತನ್ನನ್ನು ತಾನು ಸ್ಯಾಕ್ರಿಫೈಸ್ ಸ್ಟಾರ್ ಎಂದು ಕರೆಯಿಸಿಕೊಳ್ಳುವ ಸುನಿಶ್ಚಿತ್ ಕೂಡಾ ಸೇರಿಕೊಳ್ಳುತ್ತಾನೆ.

ಈತ ಯೂ ಟ್ಯೂಬ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತೆಲುಗಿನ ಟಾಪ್ ನಟರ ಬಗ್ಗೆ ತಲೆಬುಡವಿಲ್ಲದ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾನೆ.

ಪ್ರಭಾಸ್ ಅತ್ಯಾಚಾರಿ. ಆದರೆ ಪೊಲೀಸರಿಗೆ ಧಮ್ಕಿ ಹಾಕಿ ಹೊರಗಿದ್ದಾರೆ. ಜ್ಯೂ.ಎನ್ ಟಿಆರ್ ನನಗೆ ಆತ್ಮೀಯರು. ಅವರು ಪೋರ್ನ್ ಸಿನಿಮಾಗಳಲ್ಲಿ ನಟಿಸಿದ್ದರು. ಇನ್ನು ಖ್ಯಾತ ಹಾಸ್ಯ ನಟ ಬ್ರಹ್ಮಾನಂದ ಮೇಲೆ ಕೊಲೆ ಆರೋಪವಿದೆ. ಆದರೆ ದುಡ್ಡು ಕೊಟ್ಟು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಂಡಿದ್ದಾರೆ ಎಂದೆಲ್ಲಾ ಸುಳ್ಳಿನ ಕಂತೆ ಹರಿಸಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ