ಬಿಳಿ ಟೋಪಿ ಹಾಕಿಕೊಂಡು ಮಸ್ಲಿಂ ಬಾಂಧವರ ಜೊತೆ ಇಫ್ತಾರ್ ಕೂಟದಲ್ಲಿ ಭಾಗಿಯಾದ ದಳಪತಿ ವಿಜಯ್ (Video)
ಅವರ ಇಫ್ತಾರ್ ಕೂಟದ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಂಜಾನ್ ಹಬ್ಬದ ಸಂದರ್ಭದಲ್ಲಿ ರಾಜಕಾರಣಿಗಳು, ಸೆಲೆಬ್ರಿಟಿಗಳು ಇಫ್ತಾರ್ ಕೂಟಗಳಲ್ಲಿ ಭಾಗಿಯಾಗುವುದು ಸಾಮಾನ್ಯ.
ಆದರೆ ದಳಪತಿ ವಿಜಯ್ ಕೇವಲ ಭಾಗಿಯಾಗಿದ್ದು ಮಾತ್ರವಲ್ಲ, ಮುಸಲ್ಮಾನ ಬಾಂಧವರಂತೇ ಉಪವಾಸವಿದ್ದು ಇಫ್ತಾರ್ ಕೂಟದಲ್ಲಿ ಬಂದು ಪ್ರಾರ್ಥನೆ ಮಾಡಿ ಭೋಜನ ಸವಿದಿದ್ದಾರೆ. ಸಾಲಿನಲ್ಲಿ ಸಾಮಾನ್ಯನಂತೆ ಕುಳಿತು ಪ್ರಾರ್ಥನೆ ಮಾಡುವ ವಿಡಿಯೋಗಳು ವೈರಲ್ ಆಗಿವೆ.
ಇದನ್ನು ನೋಡಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಕೆಲವರು ಇದನ್ನು ಮೆಚ್ಚಿಕೊಂಡರೆ ಮತ್ತೆ ಕೆಲವರು ಇದನ್ನು ರಾಜಕೀಯ ಸ್ಟಂಟ್ ಎಂದಿದ್ದಾರೆ. ಎಲ್ಲರಂತೆ ವಿಜಯ್ ಕೂಡಾ ವೋಟ್ ಬ್ಯಾಂಕ್ ಗಾಗಿ ಮುಸ್ಲಿಮರನ್ನು ಓಲೈಸಲು ಮುಂದಾಗಿದ್ದಾರೆ ಎಂದು ಟೀಕಿಸಿದ್ದಾರೆ.