ಮುಸ್ಲಿಮರ ಅನುಕೂಲಕ್ಕಾಗಿ ರಂಜಾನ್ ತಿಂಗಳಲ್ಲಿ ಶಾಲಾ ವೇಳಾಪಟ್ಟಿ ಬದಲಿಸಿದ ರಾಜ್ಯ ಸರ್ಕಾರ

Krishnaveni K

ಶುಕ್ರವಾರ, 8 ಮಾರ್ಚ್ 2024 (16:42 IST)
ಬೆಂಗಳೂರು: ರಂಜಾನ್ ಆಚರಣೆಗಾಗಿ ಮುಸ್ಲಿಂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಶಾಲಾ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ರಂಜಾನ್ ತಿಂಗಳಲ್ಲಿ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಬೇಗನೇ ಮನೆಗೆ ತೆರಳಲು ಅವಕಾಶ ನೀಡಿದೆ.

ರಾಜ್ಯದ ಉರ್ದು ಶಾಲೆಗಳಲ್ಲಿ ರಂಜಾನ್ ತಿಂಗಳಲ್ಲಿ ಶಾಲಾ ಸಮಯದಲ್ಲಿ ಬದಲಾವಣೆಯಾಗಿದೆ. ಇತರೆ ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಬೇಗನೇ ಮನೆಗೆ ತೆರಳಲು ಅವಕಾಶ ಮಾಡಿಕೊಡಲಾಗಿದೆ. ರಂಜಾನ್ ತಿಂಗಳ ಆರಂಭದಿಂದ ಏಪ್ರಿಲ್ 10 ರವರೆಗೆ ಈ ಅನುಕೂಲ ಮಾಡಿಕೊಡಲಾಗಿದೆ.

ಉರ್ದು ಶಾಲೆಗಳಲ್ಲಿ ರಂಜಾನ್ ಅವಧಿಯಲ್ಲಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12.45 ರವರೆಗೆ ಸಮಯ ನಿಗದಿ ಮಾಡಲಾಗಿದೆ. ರಂಜಾನ್ ಅವಧಿಯಲ್ಲಿ ಕಡಿತಗೊಳಿಸಲಾದ ಅವಧಿಯನ್ನು ಮುಂದಿನ ಅವಧಿಯಲ್ಲಿ ಸರಿದೂಗಿಸಬೇಕಾಗುತ್ತದೆ. ಉಳಿದ ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಸಂಜೆ ಅರ್ಧಗಂಟೆ ಮುಂಚಿತವಾಗಿ ಮನೆಗೆ ಹೋಗಲು ಅವಕಾಶ ನೀಡಲಾಗಿದೆ.

ಇದು ರಂಜಾನ್ ಅವಧಿಯಲ್ಲಿ ಮಾತ್ರ ಜಾರಿಯಾಗಲಿದೆ. ಕೆಲವು ಮುಸ್ಲಿಂ ಶಾಸಕರು ರಂಜಾನ್ ಅವಧಿಯಲ್ಲಿ ಶಾಲಾ ಸಮಯ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆ ಸಮಯ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ