ಸಿಂಬು ಮುಂದಿನ ಚಿತ್ರದಲ್ಲಿ ನಟಿಸುವುದರ ಮೂಲಕ ಮತ್ತೆ ತಮಿಳು ಚಿತ್ರರಂಗಕ್ಕೆ ಪ್ರವೇಶಿಸಲಿದ್ದಾರೆ ಈ ನಟಿ

ಬುಧವಾರ, 18 ನವೆಂಬರ್ 2020 (08:17 IST)
ಚೆನ್ನೈ : ನಟ ಸಿಂಬು ಇತ್ತೀಚೆಗೆ ಈಶ್ವರನ್ ಚಿತ್ರದಲ್ಲಿ ತೂಕ ಇಳಿಸಿಕೊಂಡು ತುಂಬಾ ಸ್ಲಿಮ್ ಆಗಿದ್ದಾರೆ. ಈ ಚಿತ್ರವು ಪೊಂಗಲ್ 2021ರಂದು ಬಿಡುಗಡೆಯಾಗಲಿದೆ.

ಅಲ್ಲದೇ ಸಿಂಬು ಅವರು ಕಾನ್ಪರೆನ್ಸ್ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈ ಚಿತ್ರದಲ್ಲಿ ಸಿಂಬು ಅವರ ಪೋಟೊಗಳನ್ನು ಕೂಡ ಬಿಡುಗಡೆ ಮಾಡಲಾಗಿದೆ. ಈ ನಡುವೆ ಇದೀಗ ಸಿಂಬು ಅವರ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಬಿಡುಗಡೆ ಮಾಡಲಾಗಿದೆ.

ಹೌದು. ಗೌತಮ್ ಮೆನನ್ ನಿರ್ದೇಶನದ ಚಿತ್ರದಲ್ಲಿ ಸಿಂಬು ನಟಿಸಲಿದ್ದಾರೆ.  ಈ ಚಿತ್ರದಲ್ಲಿ ಸಿಂಬುಗೆ ಜೋಡಿಯಾಗಿ ಅನುಷ್ಕಾ ನಟಿಸಲಿದ್ದಾರೆ ಎನ್ನಲಾಗಿದೆ. 39 ವರ್ಷಗಳಿಂದ ತಮಿಳು ಅಭಿಮಾನಿಗಳ ಮನಸ್ಸಿನಲ್ಲಿರುವ ನಟಿ ಅನುಷ್ಕಾ ಈ ಚಿತ್ರದ ಮೂಲಕ ಮತ್ತೆ ತಮಿಳು ಚಿತ್ರರಂಗಕ್ಕೆ ಮರು ಪ್ರವೇಶ ಮಾಡಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ