ಸದ್ದು ಮಾಡುತ್ತಿದೆ ದಿ ಕೇರಳ ಸ್ಟೋರಿ: ಕೆಲವರಿಗೆ ಉಚಿತ ಶೋ ಆಫರ್!
ಚಿತ್ರದಲ್ಲಿ ಹಿಂದೂ ಯುವತಿಯರನ್ನು ಬಲವಂತವಾಗಿ ಮದುವೆಯಾಗಿ ಮತಾಂತರ ಮಾಡುವ ಬಗ್ಗೆ ಕತೆ ಹೇಳಲಾಗಿದೆ. ಈ ಸಿನಿಮಾವನ್ನು ವೀಕ್ಷಿಸುವಂತೆ ಸ್ವತಃ ಪ್ರಧಾನಿ ಮೋದಿ ಕರೆ ನೀಡಿದ್ದರು.
ಇದೀಗ ಕೆಲವೆಡೆ ಬಿಜೆಪಿ, ಹಿಂದೂ ಸಂಘಟನೆಯ ಮುಖ್ಯಸ್ಥರೇ ಉಚಿತ ವೀಕ್ಷಣೆಯ ಆಫರ್ ನೀಡುತ್ತಿದ್ದಾರೆ. ಇದು ಪ್ರತಿಯೊಬ್ಬ ಹಿಂದೂ ಯುವತಿಯರು ನೋಡಬೇಕಾದ ಚಿತ್ರವೆನ್ನಲಾಗುತ್ತಿದೆ. ಈ ಕಾರಣಕ್ಕೆ ಮೊದಲ ದಿನ ಚಿತ್ರದ ಕಲೆಕ್ಷನ್ ನೀರಸವಾಗಿದ್ದರೂ ಇದೀಗ ನಿಧಾನವಾಗಿ ಕಳೆಗಟ್ಟುತ್ತಿದೆ. ಎರಡನೇ ದಿನಕ್ಕೆ ಸಿನಿಮಾ 12 ಕೋಟಿ ರೂ. ಕಲೆಕ್ಷನ್ ಮಾಡಿದೆ.