ವಿಜಯ್ ನಟಿಸಿ, ನಿರ್ದೇಶಿಸಿರುವ 'ಭೀಮ' ಚಿತ್ರದ ಟ್ರೇಲರ್ ಬಿಡುಗಡೆ

Sampriya

ಶನಿವಾರ, 3 ಆಗಸ್ಟ್ 2024 (20:42 IST)
Photo Courtesy X
ಬೆಂಗಳೂರು: ಸ್ಯಾಂಡಲ್‌ವುಡ್‌ ಸಲಗ ವಿಜಯ್ ಅವರು ನಿರ್ದೇಶನ ಮಾಡಿ ಅಭಿನಯಿಸಿರುವ 'ಭೀಮ' ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ವಿಜಯ್ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ಕನ್ನಡದ ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, ಟ್ರೇಲರ್‌ನಲ್ಲಿ ಮಾಸ್‌ ಪ್ರೇಮಿಗಳಲ್ಲಿ ಕ್ರೇಜ್ ಹೆಚ್ಚು ಮಾಡಿದೆ.

ಟ್ರೇಲರ್ ಬಿಡುಗಡೆಯಾದ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದ್ದು, ಸಿನಿಮಾ ಇದೇ 9ರಂದು ಗ್ರ್ಯಾಂಡ್ ರಿಲೀಸ್ ಆಗಲಿದೆ.  ಈ ಸಿನಿಮಾದಲ್ಲಿ ವಿಜಯ್‌ಗೆ ಜೋಡಿಯಾಗಿ ಅಶ್ವಿನಿ ಅವರು ನಟಿಸಿದ್ದಾರೆ.

ರಂಗಾಯಣ ರಘು, ಅಚ್ಯುತ್ ಕುಮಾರ್, ಕಾಕ್ರೋಷ್ ಸುಧಿ, ಕಲ್ಯಾಣಿ ಸೇರಿದಂತೆ ದೊಡ್ಡ ತಾರಾ ಬಲಗವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ