ಜನರ ಕಣ್ಮನ ಸೆಳೆದಿದೆ ನಟಿ ಶ್ರುತಿ ಹಾಸನ್ ಧರಿಸಿದ್ದ ಈ ಮಾಸ್ಕ್
ಭಾನುವಾರ, 2 ಆಗಸ್ಟ್ 2020 (12:42 IST)
ಚೆನ್ನೈ : ಕೊರೊನಾ ಸೋಂಕು ಹೆಚ್ಚುತ್ತಿರುವ ಈ ವೇಳೆ ನಟಿ ಶ್ರುತಿ ಹಾಸನ್ ಧರಿಸಿದ್ದ ಮಾಸ್ಕ್ ಫೋಟೊ ಭಾರೀ ವೈರಲ್ ಆಗುತ್ತಿದೆ.
ಹೌದು. ಕೊರೊನಾ ಭೀತಿಯಿಂದ ಜನರು ಹಲವು ಬಗೆಯ ಮಾಸ್ಕ್ ಗಳನ್ನು ಧರಿಸುತ್ತಿದ್ದಾರೆ. ಕೆಲವರು ತಮ್ಮ ಭಾವಚಿತ್ರವಿರುವ ಮಾಸ್ಕ್ ಧರಿಸಿದ್ದರೆ, ಇನ್ನೂ ಕೆಲವರು ಚಿನ್ನ, ಬೆಳ್ಳಿಯ ಮಾಸ್ಕ್ ಧರಿಸುತ್ತಿದ್ದಾರೆ.
ಆದರೆ ಫಿಲ್ಮ್ ಫೇರ್ ಮ್ಯಾಗಜಿನ್ ಕವರ್ ಪೋಟೋದಲ್ಲಿ ನಟಿ ಶ್ರುತಿ ಹಾಸನ್ ಚಿನ್ನದ ಮಾಸ್ಕ್ ಧರಿಸಿದ್ದು, ಈ ಫೋಟಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಅಗುತ್ತಿದೆ. ಹಲವರು ಈ ಮಾಸ್ಕ್ ಗೆ ಫಿದಾ ಆಗಿದ್ದಾರೆ.